Breaking News

ಜವಳಿ ಉದ್ಯಮಕ್ಕೆ ಜಿಎಸ್​ಟಿ ಪೆಟ್ಟು: ತೆರಿಗೆ ಇಳಿಕೆಗೆ ಪತ್ರದ ಮೂಲಕ ಪ್ರಧಾನಿಗೆ ಮನವಿ

Spread the love

ಬೆಂಗಳೂರು: ಇತ್ತೀಚಿಗೆ ಕೇಂದ್ರ ಸರ್ಕಾರ ಜವಳಿ ಉತ್ಪನ್ನಗಳಿಗೆ ಶೇ.5ರಷ್ಟಿದ್ದ ಜಿಎಸ್​ಟಿ ದರವನ್ನು 12% ಹೆಚ್ಚಳ ಮಾಡಿದ್ದಕ್ಕೆ ಬಟ್ಟೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ತೆರಿಗೆ ಇಳಿಸಲು ಮನವಿ ಮಾಡಿದ್ದಾರೆ.

ಆಹಾರ, ಉಡುಪು ಹಾಗೂ ಸೂರು ಮನುಷ್ಯನಿಗೆ ಅತ್ಯಗತ್ಯ. ಬಡವರಿಂದ ಶ್ರೀಮಂತ ವರ್ಗದವರು ಬಟ್ಟೆ ತೊಡಲೇಬೇಕು. ಸೇಲ್ಸ್ ತೆರಿಗೆ ಇದ್ದ ಸಂದರ್ಭದಲ್ಲಿ ಬಟ್ಟೆಗಳನ್ನು ತೆರಿಗೆರಹಿತವಾಗಿ ಇಟ್ಟಿದ್ದ ಸರ್ಕಾರ ಜಿಎಸ್​ಟಿ ಜಾರಿಯಿಂದ 5% ತೆರಿಗೆ ವಿಧಿಸಿತ್ತು. ಇದಕ್ಕೆ ನಮ್ಮ ಆಕ್ಷೇಪಣೆಯನ್ನು ವಿತ್ತ ಸಚಿವರಿಗೆ ತಿಳಿಸಿದ್ವಿ. ಈಗ 12% ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಸಗಟು ಜವಳಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದರು.

ಇನ್ನು ಜಿಎಸ್​ಟಿ ತೆರಿಗೆ ವಿನಾಯಿತಿ ಕೋರಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಜವಳಿ ವರ್ತಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತಿದ್ದಾರೆ. ಲಾಕ್‌ಡೌನ್ ನಿಂದ ನೆಲಕಚ್ಚಿದ ಈ ಉದ್ಯಮ ಈಗ ಸುಧಾರಣೆಯತ್ತ ಮುಖ ಮಾಡುತ್ತಿದೆ. ತೆರಿಗೆ ಹೆಚ್ಚಳದಿಂದ ವ್ಯಾಪಾರದಲ್ಲಿ ಮತ್ತೆ ಇಳಿಕೆ ಆಗುವ ಸಾಧ್ಯತೆ ಇದೆ ಅನ್ನೋದು ವರ್ತಕರ ಆತಂಕ.


Spread the love

About Laxminews 24x7

Check Also

ಕರ್ನಾಟಕದಲ್ಲಿ 2305 ಕಿ.ಮೀ.ಹೈವೇ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ: ನಿತಿನ್ ಗಡ್ಕರಿ

Spread the loveನವದೆಹಲಿ, (ಆಗಸ್ಟ್ 20): ಕರ್ನಾಟಕ ರಾಜ್ಯದಲ್ಲಿ ಸುಮಾರು 48,428 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಮಾರು 2,305 ಕಿಲೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ