ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಅವರ ಕಚೇರಿಗೆ ವರ್ಗಾವಣೆ ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ಸಲ್ಲಿಸುತ್ತಿರುವುದು ಖುದ್ದು ಸಿಎಂಗೆ ದೊಡ್ಡ ತಲೆ ನೋವು ಆಗಿದೆ.
ಈ ನಡುವೆ ವರ್ಗಾವಣೆ ನೀತಿಯ ಪ್ರಕಾರ (transfer policy) ಎಲ್ಲಾ ವೃಂದದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವರ್ಗಾವಣೆ ಅವಧಿ ಮುಗಿದಿರುವುದರಿಂದ ಕಡತಗಳನ್ನು ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಲಾಗುತ್ತಿದೆ (Chief Minister for approval.). ಈ ಅವಕಾಶವನ್ನು ನಿವೃತ್ತಿಯಿಂದ ತೆರನಾದ ಹಾಗೂ ಖಾಲಿ ಹುದ್ದೆಗಳನ್ನು ತುಂಬಲು ಮಾಡಿಕೊಡಲಾಗಿತ್ತು, ಆದರೆ ಈ ಕಚೇರಿಗೆ ಸಲ್ಲಿಸಲಾಗುವ ಬಹುತೇಕ ವರ್ಗಾವಣೆ ಪ್ರಕರಣಗಳು ನಿಯಮಿತ ವರ್ಗಾವಣೆ ಸ್ವರೂಪದಾಗಿದ್ದು, ಇವುಗಳನ್ನು ಕಡಿಮೆ ಮಾಡದಿದ್ದಲ್ಲಿ, ಇಲಾಖೆಗಳಲ್ಲಿನ ಕೆಲಸಗಳ ಪ್ರಗತಿ ಕುಂಠಿತವಾಗಲು ಕಾರಣವಾಗುತ್ತದೆ. ಆದ್ದರಿಂದ ಈ ಕೆಳಕಂಡ ಮಾರ್ಪಾಡು ವರ್ಗಾವಣೆ ನೀತಿಯಲ್ಲಿ ತರಲು ಕ್ರಮ ಕೈಗೊಳ್ಳಾಗುವುದು ಅಂತ ಆದೇಶ ಹೊರಡಿಸಿದೆ.
ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಹೀಗಿದೆ:
1. ಗ್ರೂಪ್ ಬಿ, ಸಿ, ಡಿ ಖಾಲಿ ಹುದ್ದೆಗಳಿಗೆ ಇಲಾಖಾ ಸಚಿವರ ಹಂತದಲ್ಲೇ ಅನುಮೋದಿಸಿ ಆದೇಶಿಸಬೇಕು.
2. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮತ್ತು
3. ಗ್ರೂಪ್-ಎ ಖಾಲಿ ಹುದ್ದೆಗಳ ಸ್ಥಳ ನಿಯುಕ್ತಿಗೆ ಸಂಬಂಧಪಟ್ಟ ಪ್ರಸ್ತಾವನೆ ಮಾತ್ರ ಸಿಎಂ ಕಚೇರಿಗೆ ಸಲ್ಲಿಸಬೇಕು.