ಇಡೀ ದೇಶ ಕ್ಯಾಶ್ಲೆಸ್ ವ್ಯವಹಾರದ ಕಡೆ ತಿರುಗುತ್ತಿದ್ದು, ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
Googlepay, phonepe ಮತ್ತು paytm ಇಂದ ಹಣ ಪಾವತಿಸುವುದನ್ನು ನೋಡಿದ್ದೇವೆ.
ಹಣ ಪಾವತಿ ಆಗಿದೆಯೋ? ಇಲ್ಲವೋ? ಎಂಬುದನ್ನು ಪ್ರತಿ ಪೇಮೆಂಟ್ ವೇಳೆ ಖಾತರಿಪಡಿಸಿಕೊಳ್ಳುತ್ತೇವೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಆನ್ಲೈನ್ ವಂಚಕರ ಕೈಚಳಕ ನೋಡಿ ಜನರು ಶಾಕ್ ಆಗಿದ್ದಾರೆ.
ಹಣ ಪಾವತಿ ಆಗಿರುವಂತೆ ತೋರಿಸುವ ಫ್ರ್ಯಾಂಕ್ ಪೇಮೆಂಟ್ ಹೆಸರಿನ ಆಯಪ್ ಒಂದನ್ನು ಸೈಬರ್ ವಂಚಕರು ಸೃಷ್ಟಿಸಿದ್ದಾರೆ. ಅಕೌಂಟ್ಗೆ ಹಣ ಪಾವತಿ ಆಗಿರುವಂತೆ ತೋರಿಸುತ್ತದೆ, ಆದರೆ, ಹಣ ಅಕೌಂಟ್ಗೆ ಜಮೆ ಆಗುವುದಿಲ್ಲ. ಅಕೌಂಟ್ ಪರಿಶೀಲಿಸಿಕೊಳ್ಳದೇ ಹಾಗೇ ಬಿಟ್ಟು ಕಳುಹಿಸಿದ್ದಲ್ಲಿ ಪಂಗನಾಮ ಹಾಕಿಕೊಳ್ಳೋದು ಖಚಿತ. ಈ ರೀತಿ ಕೆಲಸ ಮಾಡಿ ಯುವಕನೊಬ್ಬ ಅಂಗಡಿ ಮಾಲೀಕನಿಗೆ ಸಿಕ್ಕಿಬಿದ್ದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಇಂತಹ ವಂಚಕರಿಂದ ಎಲ್ಲರೂ ಎಚ್ಚರಿದಿಂದಿರಬೇಕು.
Laxmi News 24×7