ಪುಣೆ, ನವೆಂಬರ್ 12: ಇತ್ತೀಚೆಗೆ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾದರೂ ಕೆಲ ಪ್ರದೇಶಗಳಲ್ಲಿ ಲಸಿಕೆ ಬಗ್ಗೆ ಭಯವಿದೆ. ಹೀಗಾಗಿ ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಾರೆ. ಲಸಿಕೆಯ ಬಗ್ಗೆ ಅಪನಂಬಿಕೆ ಇರುವಂತ ಸ್ಥಳದಲ್ಲಿ ಮಹಾರಾಷ್ಟ್ರದ ಚಂದ್ರಾಪುರದ ನಗರ ಕೂಡ ಒಂದು. ಇಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ತೀವ್ರ ಕಡಿಮೆ ಇರುವುದರಿಂದ ನಾಗರಿಕ ಸಂಸ್ಥೆ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ಸಾರ್ವಜನಿಕರನ್ನು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಆಕರ್ಷಿಸಲು ಸಂಸ್ಥೆ ಮುಂದಾಗಿದೆ. ಲಸಿಕೆ ಹಾಕಿಸಿಕೊಂಡವರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶ ಮಾಡಿಕೊಟ್ಟಿದೆ. ಲಸಿಕೆ ಹಾಕಿಸಿಕೊಂಡ ಸಾರ್ವಜನಿಕರು ದಿನಬಳಕೆಯ ದುಬಾರಿ ಮೊತ್ತದ ಬಹುಮಾನಗಳನ್ನು ಗೆಲ್ಲಬಹುದು.
ಮಹಾರಾಷ್ಟ್ರದ ಚಂದ್ರಾಪುರ ನಗರದಲ್ಲಿರುವ ನಾಗರಿಕ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕರಿಗೆ ಈ ಸದಾವಕಾಶ ಮಾಡಿಕೊಟ್ಟಿದ್ದಾರೆ. ಚಾಲಿತ ಲಸಿಕೆ ಕೇಂದ್ರದಲ್ಲಿ ಲಸಿಕೆಗಳನ್ನು ಪಡೆಯಲು ಬರುವ ವ್ಯಕ್ತಿಗಳಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡುತ್ತಿದ್ದಾರೆ. ಚಂದ್ರಾಪುರ ಮುನ್ಸಿಪಲ್ ಕಾರ್ಪೊರೇಶನ್‌ನ ಬಂಪರ್ ಲಕ್ಕಿ ಡ್ರಾ ನವೆಂಬರ್ 12 ರಿಂದ ನವೆಂಬರ್ 24 ರವರೆಗೆ ತೆರೆದಿರುತ್ತ