ಗದಗ: ಮೂರು ತಿಂಗಳ ಪುಟ್ಟ ಕಂದಮ್ಮಳನ್ನು ಹತ್ಯೆಗೈದು ಬಳಿಕ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಲ್ಲಪ್ಪ ಗಡಾದ (30) ಸುಧಾ (24). ಮೂರು ತಿಂಗಳ ಮಗು ರೂಪಶ್ರೀ ಮೃತ ದುರ್ದೈವಿಗಳು. ದಂಪತಿಗಳಿಬ್ಬರೂ ಹೆತ್ತ ಮಗುವನ್ನೇ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯ ಹಾಲ್ ನಲ್ಲಿ ಮಲ್ಲಪ್ಪ ನೇಣಿಗೆ ಕೊರಳೊಡ್ಡಿದ್ದರೆ, ಪತ್ನಿ ಸುಧಾ ಹಾಗೂ ಮಗು ರೂಪಶ್ರೀ ಶವ ಬೆಡ್ ರೂಮ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.