Breaking News

ಒಂದು ಕ್ಷೇತ್ರ ಗೆದ್ದು ದೇಶ ಆಳ್ತಿವಿ ಅನ್ನೋದು ಮೂರ್ಖತನ : ಬಿಜೆಪಿ ಪಂಚ್

Spread the love

ಬೆಂಗಳೂರು,ನ.3- ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ರಾಜಕೀಯ ಪಕ್ಷಗಳು ಈ ಕುರಿತು ಟ್ವೀಟ್ ವಾರ್ ಮುಂದುವರಿದಿದೆ. ಹಾನಗಲ್ ಉಪಚುನಾವಣೆ ಫಲಿತಾಂಶದ ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಟ್ವೀಟ್ ಮಾದ್ದು, ಸಿದ್ದರಾಮಯ್ಯ ಅವರೇ, ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಉಪಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಗಮನಿಸಿದ್ದೀರಾ? ನಿಮಗೆ ಮರೆವಿನ ಸಮಸ್ಯೆ ಇಲ್ಲ ಎಂದಾದರೆ ನಾವು ಅಂಕಿ-ಸಂಖ್ಯೆ ನೀಡುವುದಿಲ್ಲ. ಇಲ್ಲವಾದರೆ ಅಂಕಿಸಂಖ್ಯೆಗಳ ಸಮೇತ ನಿಮ್ಮ ಅವಕಾಶವಾದಿತನದ ಹೇಳಿಕೆ ಬಿಚ್ಚಿಡಬೇಕಾಗುತ್ತದೆ ಎಂದು ಹೇಳಿದೆ.

ಉಪಚುನಾವಣೆ ಮುಂದಿನ ರಾಜಕೀಯದ ದಿಕ್ಸೂಚಿಯೇ ಎಂದು ಚುನಾವಣೆಗೆ ಮುನ್ನ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸದೇ ಜಾರಿಕೊಂಡ ಡಿ.ಕೆ.ಶಿವಕುಮಾರ್, ಅವರು ಈಗ ಇದು ರಾಷ್ಟ್ರ ರಾಜಕಾರಣದ ಬದಲಾವಣೆ ಸಂಕೇತ ಎನ್ನುತ್ತಿದ್ದಾರೆ. ಗಾಳಿ ಬಂದತ್ತ ತೂರಿಕೊಳ್ಳುವುದು ನಾಯಕನ ಲಕ್ಷಣವಲ್ಲ, ಅವಕಾಶವಾದಿ ಕಾಂಗ್ರೆಸ್ ಎಂದು ಲೇವಡಿ ಮಾಡಿದೆ.ನಕಲಿ ಗಾಂಧಿ ಕುಟುಂಬದ ಭದ್ರಕೋಟೆ, ತವರು ಕ್ಷೇತ್ರ ಅಮೇಥಿಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರು ಸೋತಿದ್ದರು. ಮುಖ್ಯಮಂತ್ರಿಯಾಗಿದ್ದುಕೊಂಡೇ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ. ಒಂದು ಕ್ಷೇತ್ರವನ್ನು ಗೆದ್ದು ಈ ಫಲಿತಾಂಶ ದೇಶಕ್ಕೆ ಸಂದೇಶ ಎನ್ನುವುದು ಮೂರ್ಖತನ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ