ಕೊಪ್ಪಳ: ಸದಾ ಕ್ರಿಯಾಶೀಲರಾಗಿ, ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಆಡಳಿತಾಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿರುವಂತ ಕೊಪ್ಪಳ ಜಿಲ್ಲಾಧಿಕಾರಿ ಕಿಶೋರ್ ಸುರಾಳ್ಕರ್, ಇಂದು ಹೊಸ ಸಾಹಸ ಮೆರೆದರು. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಕರ್ಷಿಸೋ ನಿಟ್ಟಿನಲ್ಲಿ, ಸಣಾಪುರ ಜಲಾಶಯದಲ್ಲಿನ ಡೆತ್ ಸ್ಪಾಟ್ ಕಳಂಕ ತಪ್ಪಿಸೋ ಸಲುವಾಗಿ ಮಾಡಿದ ಕಾರ್ಯ ಮಾತ್ರ, ವಿಶೇಷವಾಗಿತ್ತು.
ಸದಾ ಕ್ರೀಯಾಶೀಲವಾಗಿ, ಜಿಲ್ಲಾಧಿಕಾರಿಯಲ್ಲದೇ, ಜಿಲ್ಲೆಯ ಅಭಿವೃದ್ಧಿಗಾಗಿ, ಜನರ ಸಮಸ್ಯೆ ಪರಿಹಾರಕ್ಕಾಗಿ ಕೆಲಸಕೂ ಸೈ ಎನಿಸಿಕೊಂಡವರು ವಿಕಾಸ್ ಕಿಶೋರ್ ಸುರಾಳ್ಕರ್ ( DC Vikash Kishor Suralkar ). ಹೀಗೆ ವಿವಿಧ ಕಾರ್ಯಗಳ ಮೂಲಕ ಸಕ್ರೀಯ ಜಿಲ್ಲಾಧಿಕಾರಿ ಎಂದು ಗುರ್ತಿಸಿಕೊಂಡಿರುವಂತ ಕೊಪ್ಪಳ ಡಿಸಿ ವಿಕಾಸ್ ಕಿಶೋರ್ ಸುರಾಳ್ಕರ್, ಇಂದು ಹೊಸ ಸಾಹಸಕ್ಕೂ ಸೈ ಎಂದ್ರು.
ಇಂದು ಸಣಾಪುರದ ಜಲಾಶಯಕ್ಕೆ ಇದ್ದಂತ ಡೆತ್ ಸ್ಪಾಟ್ ಕಳಂಕ ತಪ್ಪಿಸೋ ಸಲುವಾಗಿ, ಸಣಾಪುರ ಜಲಾಶಯದಲ್ಲಿನ ( Sanapura Lake ) ಬೆಟ್ಟದ ಮೇಲಿನಿಂದ ನೇರವಾಗಿ ಡೈವ್ ಹೊಡೆಯುವ ಮೂಲಕ, ಗಮನ ಸೆಳೆದರು. ಸ್ವಿಮ್ಮಿಂಗ್ ಸೂಟ್ ಹಾಕಿ, ಸಣಾಪುರ ಜಲಾಶಯದಲ್ಲಿ ಈಜಾಡಿ ಗಮನ ಸೆಳೆದರು. ಈ ಮೂಲಕ ಪ್ರವಾಸಿಗರಿಗೆ ಡೆತ್ ಸ್ಪಾಟ್ ಅಲ್ಲ, ಇದು ಪ್ರವಾಸಿಗರ ತಾಣ ಎಂಬುದನ್ನು ತೋರಿಸಿಕೊಟ್ಟರು.