Breaking News

ಯಾವುದೇ ಪಕ್ಷದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ: ಎಚ್ ಡಿ ಕುಮಾರಸ್ವಾಮಿ

Spread the love

ಹುಬ್ಬಳ್ಳಿ: ಜೆಡಿಎಸ್ ಯಾವುದೇ ಪಕ್ಷದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ. ಬಿಜೆಪಿ ಬಿ ಟೀಂ ಅಥವಾ ಒಳ ಒಪ್ಪಂದ ಎನ್ನುವ ಸುಳ್ಳು ಆರೋಪಗಳನ್ನು ಬಿಟ್ಟರೆ ನಮ್ಮ ಹಾಗೂ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಬೇರೆ ವಿಚಾರಗಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಇಲ್ಲಿನ ಕಿತ್ತೂರು ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮಾತನಾಡಲು ಬೇರೆ ಯಾವುದೇ ವಿಚಾರಗಳು ಇಲ್ಲ. ಹೀಗಾಗಿ ಪಕ್ಷ ಹಾಗೂ ನಮ್ಮ ವಿರುದ್ದ ಒಂದೇ ವಿಚಾರ ಇಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ವಿರುದ್ದ ವೈಯಕ್ತಿಕ ನಿಂದನೆ ಮಾಡುವ ಮೂಲಕ ತಮ್ಮ ವ್ಯಕ್ತಿತ್ವ ಕುಂದಿಸಿಕೊಳ್ಳುವ ಕೆಲಸ ಮಾಡಬಾರದು ಎಂದರು.

ಸಿಂದಗಿ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಒಳ್ಳೆಯ ವಾತಾರಣವಿದೆ. ಐದು ದಿನಗಳ ಕಾಲ ಅಲ್ಲಿ ಪ್ರಚಾರ ಮಾಡಿದ್ದೇನೆ. ದೇವೇಗೌಡರ ಹಾಗೂ ನನ್ನ ಕಾಲದಲ್ಲಿ ನೀಡಿರುವ ನೀರಾವರಿ ಹಾಗೂ ಇತರೆ ಯೋಜನೆಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಹೀಗಾಗಿ ಅಲ್ಲಿ ಗೆಲುವು ನಿಶ್ಚಿತವಾಗಿದೆ. ಜನತಾ ಪರಿವಾರದಲ್ಲಿದ್ದ ಸಿ.ಎಂ.ಉದಾಸಿಯವರು ಬಿಜೆಪಿಗೆ ಹೋದ ಮೇಲೆ ಪಕ್ಷದ ವರ್ಚಸ್ಸು ಕಡಿಮೆಯಾಗಿತ್ತು. ಇದೀಗ ಅಲ್ಲಿಯೂ ಕೂಡ ಸ್ಪರ್ಧೆ ಮಾಡಿದ್ದು, ಪ್ರಚಾರ ನಂತರ ಅಲ್ಲಿನ ಸ್ಥಿತಿಗತಿ ಗೊತ್ತಾಗಲಿದೆ ಎಂದರು.

ಮುಖಾಮುಖಿಯಾದ ನಾಯಕರು: ರಾಣಿ ಕಿತ್ತೂರು ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಆಗಮಿಸಿದ್ದರು. ಹಾನಗಲ್ಲ ಉಪ ಚುನಾವಣೆ ಪ್ರಚಾರಕ್ಕೆ ಹೊರಟಾಗ ಇದೇ ಸಮಯಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲು ಆಗಮಿಸಿದರು. ದೂರದಿಂದಲೇ ಪರಸ್ಪರ ಕುಶಲೋಪರಿ ನಡೆಸಿದರು. ಸಚಿವ ಜೋಶಿ ಅವರು ಹೇಗಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ಕೇಳಿದರು. ನಿಮ್ಮ‌ಆಶೀರ್ವಾದದಿಂದ ಚನ್ನಾಗಿದ್ದೇನೆ ಎಂದು ಎಚ್.ಡಿ.ಕೆ ಪ್ರತಿಕ್ರಿಸಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ