ಹಾವೇರಿ: ಕಬ್ಬಿನ ಟ್ರ್ಯಾಕ್ಟರ್ ಬಾಲಕನ ಹೊಟ್ಟೆಯ ಮೇಲೆ ಹರಿದು ತೀವ್ರವಾಗಿ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ರಾಣೇಬೆನ್ನೂರ ರಸ್ತೆಯ ಬಳಿ ನಡೆದಿದೆ.

ಪಟ್ಟಣದ ಗಣೇಶ ವಡ್ಡರ (11) ವರ್ಷದ ಬಾಲಕನ ಮೇಲೆ ಹಿಂಬದಿಯ ಟ್ರ್ಯಾಲಿ ಹರಿದಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಗುತ್ತಲ ಸಮುದಾಯ ಆರೋಗ್ಯ ಕೇಂದ್ರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ತೀವ್ರವಾಗಿ ನರಳುತ್ತಾ ಬಿದ್ದಿದ್ದ ಬಾಲಕನ ಸ್ಥಿತಿ ಕಂಡು ಮಾಹಿಳಾ ಸಂಬಂಧಿಯೊಬ್ಬರು ರೋಧಿಸಿದ ದೃಶ್ಯ ಕಂಡು ಸಾರ್ವಜನಿಕರು ಮುಮ್ಮಲ ಮರುಗಿದರು. ಇತ್ತ ಚಾಲಕ ಹಾಗೂ ಟ್ರ್ಯಾಕ್ಟರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ಗುತ್ತಲ ಠಾಣೆಯ ಎಎಸ್‌ಐ ವೈ. ಡಿ ಹಾವನೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7