Breaking News

ಮದ್ವೆಯಾದ ಬಳಿಕ ಒಂಟಿಯಾಗಿ ಜೀವಿಸ್ತಿರೋದು ಅವರ ನಾಯಕ- ಸುಧಾಕರ್‌ಗೆ ನಿಂಬಾಳ್ಕರ್ ಟಾಂಗ್

Spread the love

ಬೆಳಗಾವಿ: ಮದುವೆಯಾದ ಬಳಿಕ ಒಂಟಿಯಾಗಿ ಜೀವಿಸುತ್ತಿರುವುದು ಅವರ ನಾಯಕ. ಒಂಟಿಯಾಗಿ ಜೀವಿಸುವ ಅವರ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನಾದರೂ ಪ್ರತಿಕ್ರಿಯೆಗಳಿವೆಯಾ ಎಂದು ಸಚಿವ ಡಾ. ಕೆ ಸುಧಾಕರ್ ಅವರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.

ಆಧುನಿಕ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಪುರುಷರಿಗೆ ಆಪ್ತ ಸಮಾಲೋಚನೆಯ ಅವಶ್ಯವಿದೆ. ವಿಶ್ವ ಮಾನಸಿಕ ಆರೋಗ್ಯ ದಿನದಂದು ಆಪ್ತ ಸಮಾಲೋಚನೆಯ ಅವಶ್ಯವಿದೆ. ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನ ಬೇರೆಯವರು ನಿರ್ಧರಿಸೋದಲ್ಲ ಆಕೆಯೇ ನಿರ್ಧರಿಸಬೇಕು ಎಂದು ಕಿಡಿಕಾರಿದ್ದಾರೆ.

ಸುಧಾಕರ್ ಹೇಳಿದ್ದೇನು..?
ಭಾನುವಾರ ನಿಮ್ಹಾನ್ಸ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಕೂಡು ಕುಟುಂಬಗಳ ನಶಿಸುವಿಕೆ ವಿಚಾರ ಪ್ರಸ್ತಾಪ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಮುತ್ತಾತ-ಮುತ್ತಜ್ಜಿ ಇರುವುದು ಬಿಡಿ, ನಾವು ನಮ್ಮ ಹೆತ್ತವರು ನಮ್ಮ ಜೊತೆಗೆ ಇರಲು ಬಯಸಲ್ಲ. ಇವತ್ತು ಇದನ್ನು ಹೇಳಲು ಬೇಸರ ಆಗುತ್ತೆ. ಭಾರತದಲ್ಲಿ ಬಹಳಷ್ಟು ಅಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸ್ತಾರೆ. ಒಂದು ವೇಳೆ ಅವರು ಮದುವೆ ಆದರೂ ಅವರು ಜನ್ಮ ನೀಡಲು ಬಯಸಲ್ಲ. ಅವರು ಬೇರೆಯವರಿಂದ ಮಗು ಹೆರಲು ಇಷ್ಟಪಡುತ್ತಾಳೆ. ಹೀಗಾಗಿ ನಮ್ಮ ಆಲೋಚನೆಯಲ್ಲಿ ವಿಚಿತ್ರ ಬದಲಾವಣೆ ಆಗಿದೆ, ಅದು ಒಳ್ಳೆಯದಲ್ಲ ಎಂದಿದ್ದರು. 


Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ