ಹಾವೇರಿ: ದೇಶದಲ್ಲಿ ಅಜಾರಕತೆ ಸೃಷ್ಟಿಯಾಗಿದೆ. ಇಂತಹ ಕೆಟ್ಟ ಆಡಳಿತವನ್ನು ಎಂದಿಗೂ ನೋಡಿಲ್ಲ. ಜನರಿಗೆ ಸತ್ಯ ಗೊತ್ತಾದ ಮೇಲೆ, ಆಕ್ರೋಶದ ಕಟ್ಟೆ ಒಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ಕಿಡಿಕಾರಿದ್ದಾರೆ.
ಅವರು ಸೋಮವಾರ ಹಾನಗಲ್ಲ ಉಪಚುನಾವಣೆ ಹಿನ್ನಲೆಯಲ್ಲಿ ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬಿಜೆಪಿ ರೈತ ವಿರೋಧಿ ಕೆಲಸ ಮಾಡಿದೆ. ರೈತರನ್ನು ಕೊಲೆ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಬಿಜೆಪಿ ಜನದ್ರೋಹಿ, ರೈತ ದ್ರೋಹಿ ಸರ್ಕಾರವಾಗಿದ್ದು, ಉತ್ತರಪ್ರದೇಶದಲ್ಲಿ ರೈತರು ಹೋರಾಡುತ್ತಿದ್ದರೆ ಗೃಹ ಸಚಿವರ ಮಗ ರೈತರ ಮೇಲೆ ಕಾರ್ ಚಲಾಯಿಸಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಪ್ರಿಯಾಂಕ ಗಾಂಧಿ ಹೋರಾಟಕ್ಕೆ ಜನ ದನಿ ಗೂಡಿಸಲು ಹೋದರೆ ಅವರನ್ನು ಬಂಧಿಸುತ್ತಾರೆ. ಕಾಂಗ್ರೆಸ್ ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಿದೆ. ಬಿಜೆಪಿಗೆ ಈ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಅಧಿಕಾರ ಕಳೆದುಕೊಂಡಿದೆ ಎಂದು ದೂರಿದರು.