Breaking News

‘ಮಾ’ ಚುನಾವಣೆಯಲ್ಲಿ ಸೋಲು ಕಂಡ ನಟ ಪ್ರಕಾಶ್ ರಾಜ್

Spread the love

ಹೈದರಾಬಾದ್: ಭಾನುವಾರ ನಡೆದ ‘ತೆಲುಗು ಮೂವೀಸ್‌ ಆರ್ಟಿಸ್ಟ್ಸ್ ಅಸೋಶಿಯೇಷನ್’ (MAA) ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ನಟ ಹಾಗೂ ನಿರ್ಮಾಪಕ ಮೋಹನ್‌ ಬಾಬು ಅವರ ಮಗ ಮಂಚು ವಿಷ್ಣು ವಿರುದ್ಧ ಸುಮಾರು 400 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 900 ಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆ ತಡರಾತ್ರಿವರೆಗೂ ನಡೆದು ಫಲಿತಾಂಶ ಪ್ರಕಟಗೊಂಡಿದೆ.

ಪ್ರಕಾಶ್ ರಾಜ್ ಪ್ಯಾನೆಲ್‌ನ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ ಸ್ಥಾನ ಗೆದ್ದುಕೊಂಡಿದ್ದು ಬಿಟ್ಟರೇ, ಬಹುತೇಕ ಸ್ಥಾನಗಳನ್ನು ಮಂಚು ವಿಷ್ಣು ಅವರ ಪ್ಯಾನೆಲ್ ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಷ್ಣು ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಮಂಚು ವಿಷ್ಣು ಗೆಲುವಿನಲ್ಲಿ ಅವರ ತಂದೆ ಮೋಹನ್ ಬಾಬು ಅವರ ಶ್ರಮ ದೊಡ್ಡದಿದೆ ಎನ್ನಲಾಗುತ್ತಿದೆ.

 

ಮಂಚು ವಿಷ್ಣು

ಚುನಾವಣೆಗೂ ಪೂರ್ವ ತೆಲುಗು ಚಿತ್ರರಂಗದಲ್ಲಿ ಮಾ ಚುನಾವಣೆ ವಿಷಯ ಬಹಳ ಜೋರಾಗಿ ನಡೆದಿತ್ತು. ನಟ ಚಿರಂಜೀವಿ ಹಾಗೂ ಅವರ ಕುಟುಂಬದವರ ಬೆಂಬಲ ಇದ್ದರೂ ಪ್ರಕಾಶ್ ರಾಜ್ ಸೋತಿದ್ದಾರೆ. ಮಂಚು ವಿಷ್ಣು ಪ್ಯಾನೆಲ್‌ನವರು, ಪ್ರಕಾಶ್ ರಾಜ್ ಹೊರಗಿನವರು ಎಂದು ಬಿಂಬಿಸಿದ್ದರು. ಪರಸ್ಪರ ವಾಗ್ದಾಳಿಗಳು ನಡೆದಿದ್ದವು.

‘ಪವನ್ ಕಲ್ಯಾಣ್ ಸಿನಿಮಾದ ಮಾರ್ನಿಂಗ್ ಶೋ ಒಂದರ ಕಲೆಕ್ಷನ್ ಮಂಚು ವಿಷ್ಣು ಸಿನಿಮಾದ ಬಜೆಟ್’ ಎಂದು ಪ್ರಕಾಶ್ ರಾಜ್ ಮೂದಲಿಸಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ