Breaking News

ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

Spread the love

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್​ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್​ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಯು ಕೇವಲ ಜನಸಾಮಾನ್ಯನಿಗೆ ಮಾತ್ರವಲ್ಲದೇ ಸರ್ಕಾರದ ಪಾಲಿಗೂ ಚಿಂತಾಜನಕ ವಿಷಯವಾಗಿ ಬದಲಾಗಿದೆ.

ತೈಲೋತ್ಪನ್ನಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಶಾಸಕರ ಕಾರುಗಳು ದುರ್ಬಳಕೆಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್​ ರೂಪಿಸಿದೆ. ಮಿತವ್ಯಯ ಮಾಡಲು ನಿರ್ಧರಿಸಿರುವ ಆರ್ಥಿಕ ಇಲಾಖೆಯು ಹೊಸ ಕ್ರಮವೊಂದನ್ನು ಕೈಗೊಂಡಿದೆ.

ಶಾಸಕರ ಆಪ್ತರು ಶಾಸಕರ ಹೆಸರಿನಲ್ಲಿ ಕಾರು ಬಳಕೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟ್ರಿಪ್​ಶೀಟ್​​ಗೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಟ್ರಿಪ್​ ಶೀಟ್​ಗೆ ಪ್ರತಿಬಾರಿ ಶಾಸಕರೇ ಸಹಿ ಹಾಕಬೇಕು. ಈ ರೀತಿ ಮಾಡುವುದರಿಂದ ಶಾಸಕರ ಪಿಎ ಹಾಗೂ ಆಪ್ತರು ಇನ್ನೋವಾ ಕಾರನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.

 

Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ