Breaking News

ಪ್ರತಿಭೆಗಳ ಬಳಕೆಗೆ ಪೂರಕ ವಾತಾವರಣ ಸೃಷ್ಟಿಗೆ ಸರಕಾರ ಸಿದ್ದವಿದೆ: ಸಿಎಂ ಬಸವರಾಜ್ ಬೊಮ್ಮಾಯಿ

Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪ್ರತಿಭೆ ಇದೆ, ಆದರೆ ಅವಕಾಶದ ಕೊರತೆ ಇದೆ. ಪ್ರತಿಭೆ ವಲಸೆ ತಡೆ, ಇದರ ಸಮರ್ಪಕ ಬಳಕೆಗೆ ಎಲ್ಲ ರೀತಿಯ ನೆರವು, ಪ್ರೋತ್ಸಾಹಕ್ಕೆ ಸರಕಾರ ಸಿದ್ದವಿದೆ. ಈ ನಿಟ್ಟಿನಲ್ಲಿ ಉದ್ಯಮ ವಲಯವೂ ಮುಂದೆ ಬರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಯಾಂಡ್ ಬೆಂಗಳೂರು ಇನ್ನೋವೇಶನ್ ಮತ್ತು ಇಂಪ್ಯಾಕ್ಟ್ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಪ್ರತಿಭೆ ಬೇರೆ ಕಡೆ ವಲಸೆ ಹೋಗುತ್ತಿದೆ. ಬೆಂಗಳೂರಿನಲ್ಲಿ ತಮ್ಮ ಪ್ರತಿಭೆ ಏನೆಂಬುದನ್ನು ತೋರಿಸಿದ್ದಾರೆ. ಹಿಂದೆ ಉತ್ತರದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹೆಚ್ಚಿಗೆ ಇರಲಿಲ್ಲ. ಇದೀಗ ತಾಲೂಕಿಗೊಂದು ಇಂಜಿನಿಯರ್ ಕಾಲೇಜುಗಳಾಗಿವೆ. ಪ್ರತಿಭೆಗಳ ಬಳಕೆಗೆ ಪೂರಕ ವಾತಾವರಣ ಸೃಷ್ಟಿಗೆ ಸರಕಾರ ಸಿದ್ದವಿದೆ. ಇದಕ್ಕೆ ಉದ್ಯಮಿಗಳು ಮುಂದೆ ಬರಬೇಕು ಎಂದರು.

ಬೆಂಗಳೂರು ಹೊರತಾದ ಪ್ರದೇಶದಲ್ಲಿ ಐಟಿ- ಬಿಟಿ ಉದ್ಯಮ ಬೆಳವಣಿಗೆಗೆ ಯತ್ನ ಕೈಗೊಳ್ಳಲಾಗಿದೆ. ಮೈಸೂರು, ಮಂಗಳೂರುನಲ್ಲಿ ಒಂದಿಷ್ಟು ಬೆಳವಣಿಗೆ ಬಿಟ್ಟರೆ ನೀರಿಕ್ಷಿತ ಯಶಸ್ಸು ಸಿಕ್ಕಿಲ್ಲ. ಬೆಂಗಳೂರು ಹೊರತಾದ ಉದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಕಾಲಮಿತಿಯ ಪ್ರಸ್ತಾವನೆ ರೂಪಿಸಿದರೆ ಅದರ ಅನುಷ್ಠಾನಕ್ಕೆ ಸರಕಾರ ಬದ್ದ ಎಂದರು.

ಉದ್ಯಮ ವಲಯದ ಅವಿಷ್ಕಾರ, ಸಂಶೋಧನೆ ಅನುಷ್ಠಾನಗೊಳ್ಳುವಂತೆ ಆಗಬೇಕು. ಈಗಾಗಲೇ ರಾಜ್ಯದಲ್ಲಿ 150 ಐಐಟಿ ಗಳನ್ನು ಮೇಲ್ದರ್ಜೆಗೆರಿಸಲಾಗಿದೆ. ಅದೇ ರೀತಿ ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಅಟಲ್ ಬಿಹಾರಿ ವಾಜಪೇಯಿ ಟಿಂಕರಿಂಗ್ ಲ್ಯಾಬ್ ಗಳನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಉದ್ಯಮಿಗಳು ಮುಂಬಯಿ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಉದ್ಯಮ ಆರಂಭಕ್ಕೆ ಆಸಕ್ತಿ ತೋರಬೇಕಾಗಿದೆ. ಬೇಕಾಗುವ ಎಲ್ಲ ಪ್ರೋತ್ಸಾಹ, ರಿಯಾಯಿತಿ ನೀಡಲು ಸರಕಾರ ಸಿದ್ದವಿದೆ ಎಂದರು.

ಉದ್ಯಮಿ ಅರವಿಂದ ಮೆಳ್ಳಿಗೇರಿ ವರ್ಚುವಲ್ ಮೂಲಕ ಮಾತನಾಡಿ, ಹುಬ್ಬಳ್ಳಿಯಲ್ಲಿ ಹಾರ್ಡ್ ವೇರ್, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳ ವಿನ್ಯಾಸ, ಉತ್ಪಾದನೆ ಉದ್ಯಮ ಆರಂಭಿಸುವುದಾಗಿ ಹೇಳಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ