Breaking News

ಸಂಡೇ ಲಾಕ್‍ಡೌನ್ ಸಂಚಾರ ಸಂಪೂರ್ಣ ಸ್ತಬ್ಧ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭ

Spread the love

ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ.

ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆರಂಭವಾಗಿದೆ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಹಾಸನದಲ್ಲಿ ಮಳೆಯ ಸಪೋರ್ಟ್ ನೀಡಿದಂತಾಗಿದೆ. ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿರುವುದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡುತ್ತಿದ್ದಾರೆ.

ಕೆಲವರು ಮಳೆಯಿಂದಾಗಿ ನೀರು ಬೀಳದ ಜಾಗದಲ್ಲಿ ಆಶ್ರಯ ಪಡೆದಿದ್ದಾರೆ. ಇಂದು ಕರ್ಫ್ಯೂ ಜಾರಿಯಾಗಿರುವುದರಿಂದ ಬಹುತೇಕ ಹಾಸನದ ರಸ್ತೆಗಳು ಖಾಲಿ, ಖಾಲಿಯಾಗಿವೆ. ಆದರೂ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಕಾರು, ಆಟೋ, ಲಾರಿ ಓಡಾಡುತ್ತಿದೆ.

ಇನ್ನೂ ಶಿವಮೊಗ್ಗದಲ್ಲಿ ಮುಂಜಾನೆಯೇ ಜಿಟಿಜಿಟಿ ಮಳೆ ಆರಂಭವಾಗಿದೆ. ಸಂಡೇ ಲಾಕ್‍ಡೌನ್ ಹಾಗೂ ಜಿಟಿಜಿಟಿ ಮಳೆ ಕಾರಣ ಮಲೆನಾಡಿನ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.


Spread the love

About Laxminews 24x7

Check Also

ಬೆಳಗಾವಿಗೆ ಆಗಮಿಸಲಿದ್ದಾರೆ ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ

Spread the loveಬೆಳಗಾವಿ: ಶಿರಸಿ ವೇದ ವೆಲ್‌ನೆಸ್ ಸೆಂಟರ್ ಹಾಗೂ ನಿಸರ್ಗಮನೆ ಖ್ಯಾತ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ