Breaking News

ಐಟಿ ದಾಳಿ ಬೆನ್ನಲ್ಲೇ ಬಿಎಸ್​ವೈ ಆಪ್ತನಿಗೆ CM ಸಿಎಂ ಕಚೇರಿಯಿಂದ ಗೇಟ್​ಪಾಸ್..!

Spread the love

ಬೆಂಗಳೂರು: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಆಪ್ತ ಉಮೇಶ್​ ಅವರಿಗೆ ಸಿಎಂ ಕಚೇರಿ ಡ್ಯೂಟಿಯಿಂದ ಗೇಟ್ ​ಪಾಸ್ ನೀಡಲಾಗಿದೆ.

ಓಓಡಿ ಆದೇಶವನ್ನ ರಾಜ್ಯ ಸರ್ಕಾರ ರದ್ದುಗೊಳಿಸಿ, ಉಮೇಶ್​ ಅವರಿಗೆ ಶಾಕ್ ನೀಡಿದೆ. ಅದರಂತೆ ಉಮೇಶ್​ ಅವರ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಸರ್ಕಾರದ ಆದೇಶದಿಂದ ಇನ್ಮುಂದೆ ಉಮೇಶ್​ ಅವರು ಸಿಎಂ ಸಚಿವಾಲಯದಲ್ಲಿ ಅನ್ಯಸೇವೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸೋದಕ್ಕೆ ತಡೆ ಬಿದ್ದಿದೆ.

ಈ ಮೊದಲು ಉಮೇಶ್ ಬಿಎಂಟಿಸಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹತ್ತಿರವಾಗಿ ಸಿಎಂ ಸಚಿವಾಲಯದ ನೀರಾವರಿ ಇಲಾಖೆಯಲ್ಲಿ ಕೆಲಸ ನಿಭಾಯಿಸುತ್ತಿದ್ದರು.

ಇವರ ಕರ್ತವ್ಯದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿನ್ನೆ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಉಮೇಶ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇಂದು ಕೂಡ ದಾಳಿ ಮುಂದುವರಿದಿದೆ. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಎಂ ಕಚೇರಿಯಿಂದ ಗೇಟ್​ಪಾಸ್ ನೀಡಿದೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ