ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಉತ್ತರ ಪ್ರದೇಶದ ಲಖಿಂಪುರ- ಖೇರಿ ಬಳಿ ಪ್ರತಿಭಟನೆ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರು ಹರಿದು ಮೃತರಾದ ರೈತ ಕುಟುಂಬಗಳಿಗೆ ಅಲ್ಲಿಯ ಬಿಜೆಪಿ ಸರ್ಕಾರ ಕೇವಲ ₹45 ಲಕ್ಷ ಪರಿಹಾರ ನೀಡುತ್ತಿದೆ. ಇಂತಹ ಘಟನೆಯಲ್ಲಿ ಬಿಜೆಪಿಯ ಯಾವುದೇ ಮುಖಂಡ ಸತ್ತರೂ ಕಾಂಗ್ರೆಸ್ ಪಕ್ಷದಿಂದ ₹1 ಕೋಟಿ ಪರಿಹಾರ ನೀಡುತ್ತೇವೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಲಖಿಂಪುರ ಘಟನೆ ಖಂಡಿಸಿ ಕಾಂಗ್ರೆಸ್‌ನಿಂದ ಇಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರು ಮಾತನಾಡಿದ ವಿಡಿಯೊ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು, ‘ಹೀಗೆ ಹೇಳುವ ಮೂಲಕ ಶಾಸಕರು ಬಿಜೆಪಿ ಮುಖಂಡರನ್ನು ಕೊಲೆಗೈಯುವುದಕ್ಕೆ ಪ್ರಚೋದನೆ ನೀಡಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.
Laxmi News 24×7