ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಈಗಾಗಲೇ ಎರಡು ಕ್ಯಾಂಡಿಡೇಟ್‍ಗಳಾಗಿವೆ. ಎರಡು ಚಡ್ಡಿಗಳಿವೆ. ಇನ್ನು ಎರಡು ವರ್ಷ ಚಡ್ಡಿ ಗಟ್ಟಿ ಉಳಿಯಬೇಕಲ್ಲ.
ಇವರಿವರ ಬಡಿದಾಡಿ ಹರಿದುಕೊಂಡರೆ ಏನೂ ಮಾಡೋಕೆ ಬರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ಹೇಳಿಕೆ ಬಗ್ಗೆ ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ವಿರೋಧಿಗಳು ಯಾವಾಗಲೂ ಇರಬೇಕು. ವಿರೋಧಿಗಳು ಇಲ್ಲ ಎಂದರೆ ನಾವು ಮಲಗಿ ಬಿಡುತ್ತೇವೆ.
ವಿರೋಧಿಗಳು ಬಡದ ಎಬ್ಬಿಸುವುದು, ಕಲ್ಲು ಒಗೆಯುವುದು, ಪೋಸ್ಟರ್‍ಗೆ ಬೆಂಕಿ ಹಚ್ಚುವುದು ಇದೆಲ್ಲಾ ಎದ್ದರೆ ಎಚ್ಚರ ಇರುತ್ತೇವೆ. ಆದರೆ ಹೇಳಿಕೆಗಳು ಸರಿಯಾದ ದಾಟಿಯಲ್ಲಿ ಇರಬೇಕು. ಜನ ಅದನ್ನು ಒಪ್ಪುವಂತೆ ಇರಬೇಕು. ಮೈಕ್ ಇದೆ ಭಾಷಣ ಮಾಡುತ್ತೇವೆ ಎಂದು ಕೊಲ್ಹಾಪುರ, ಫಂಡರಾಪುರಕ್ಕೆ ಹೋಗಿ, ಸುತ್ತಾಡಿ ಬಿಜಾಪುರದಿಂದ ಬೆಳಗಾವಿಗೆ ಬರುವುದಲ್ಲ.
ಆರೋಗ್ಯಕರ ಟೀಕೆಗಳನ್ನು ಮಾಡಬೇಕು ಎಂದರು.ಇನ್ನು ಮಹಾರಾಷ್ಟ್ರದ ಆನಂದಿಬಾಯಿಗೆ ಲಕ್ಷ್ಮೀ ಹೆಬ್ಬಾಳ್ಕರ್‍ನ್ನು ಸಂಜಯ್ ಪಾಟೀಲ್ ಹೋಲಿಸಿದ್ದಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಅವರು ನೆಗೆಟಿವ್ ಹೇಳಿದ್ದನ್ನು ನಾವು ಪಾಸಿಟಿವ್ ಮಾಡಿಕೊಳ್ಳಬೇಕು. ಅವ ಕಲ್ಲ ಒಗೆದಿದ್ದಾನೆ ಎಂದು ನಾವು ಕಲ್ಲು ಒಗೆಯುವುದಕ್ಕೆ ಆಗುವುದಿಲ್ಲ.
ಅದನ್ನು ತಪ್ಪಿಸಿಕೊಳ್ಳಬೇಕು. ರಾಜಕೀಯವಾಗಿ ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಅದಕ್ಕೆ ನಮ್ಮಿಂದ ಏನಾದ್ರು ತಪ್ಪು ಆಗಿದ್ದರೆ ಸುಧಾರಣೆ ಮಾಡಲು ಪ್ರಯತ್ನಿಸಬೇಕು. ಸಂಜಯ್ ಪಾಟೀಲ್‍ರ ಹೇಳಿಕೆಗೆ ಗಮನಹರಿಸುವ ಅವಶ್ಯಕತೆ ಇಲ್ಲ. ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಆಗದ ಕೆಲಸವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ್ದಾರೆ ಎಂದು ಶ್ಲಾಘಿಸಿದರು