Breaking News

ವಾಮಾಚಾರ’ ನೆಪದಲ್ಲಿ ₹4.41 ಕೋಟಿ ವಂಚನೆ

Spread the love

ಬೆಂಗಳೂರು: ‘ವಾಮಾಚಾರ ಮಾಡಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂಬುದಾಗಿ ಹೇಳಿ ಪೂಜೆ ನೆಪದಲ್ಲಿ ₹ 4.41 ಕೋಟಿ ಪಡೆದು ವಂಚಿಸಿರುವ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

‘ತ್ಯಾಗರಾಜನಗರದ ನಿವಾಸಿ ಗೀತಾ ಗುರುದೇವ್ ಎಂಬುವರು ತಮಗಾದ ವಂಚನೆ ಬಗ್ಗೆ ದೂರು ನೀಡಿದ್ದರು. ಆರೋಪಿಗಳಾದ ಜಯಶ್ರೀ ಹಾಗೂ ರಾಕೇಶ್‌ ಎಂಬುವರನ್ನು ಬಂಧಿಸಲಾಗಿದೆ. ಅವರಿಬ್ಬರಿಂದ 1 ಕೆ.ಜಿ‌ ಚಿನ್ನ ಹಾಗೂ ₹ 10 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರಾದ ಗೀತಾ ಅವರ ಮನೆಯ ಕೆಲಸಕ್ಕಾಗಿ ಆರೋಪಿ ಜಯಶ್ರೀ ಆಗಾಗ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಕಷ್ಟಗಳನ್ನು ಗೀತಾ, ಆರೋಪಿ ಬಳಿ ಹೇಳಿಕೊಳ್ಳುತ್ತಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಜಯಶ್ರೀ, ಇತರೆ ಆರೋಪಿಗಳ ಜೊತೆ ಸೇರಿ ಗೀತಾ ಅವರನ್ನು ವಂಚಿಸಿದ್ದಳು. ಇಬ್ಬರು ಆರೋಪಿಗಳು ಮಾತ್ರ ಸಿಕ್ಕಿಬಿದ್ದಿದ್ದು, ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ರಕ್ತಕಾರಿ ಸಾಯುವುದಾಗಿ ಭಯ ಹುಟ್ಟಿಸಿದ್ದಳು: ‘ಗೀತಾ ಅವರ ಮುಗ್ಧತೆ ತಿಳಿದಿದ್ದ ಆರೋಪಿ ಜಯಶ್ರೀ, ‘ನಿಮ್ಮ ಸಮಸ್ಯೆಗಳಿಗೆ ನನ್ನ ಬಳಿ ಪರಿಹಾರವಿದೆ. ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಅದರಿಂದ ಬಚಾವಾಗಬೇಕಾದರೆ ವಾಮಾಚಾರ ಮಾಡಿಸಬೇಕು’ ಎಂದಿದ್ದಳು. ‘ಶೀಘ್ರವೇ ವಾಮಾಚಾರ ಮಾಡಿಸದಿದ್ದರೆ, ನೀವು ಹಾಗೂ ನಿಮ್ಮ ಮನೆಯವರು ರಕ್ತಕಾರಿ ಸಾಯುತ್ತಿರಾ’ ಎಂಬುದಾಗಿಯೂ ಭಯ ಹುಟ್ಟಿಸಿದ್ದಳು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಾತು ನಂಬಿದ್ದ ಗೀತಾ, ವಾಮಾಚಾರ ಮಾಡಿಸಲು ಒಪ್ಪಿಕೊಂಡಿದ್ದರು. ಆರೋಪಿ ರಾಕೇಶ್ ಹಾಗೂ ಇತರರನ್ನು ಮನೆಗೆ ಕರೆಸಿದ್ದ ಜಯಶ್ರೀ, ವಾಮಾಚಾರ ಮಾಡಲು ಹೇಳಿದ್ದಳು. ಕೆಲ ವಸ್ತುಗಳನ್ನು ತಂದಿದ್ದ ಆರೋಪಿಗಳು, ಮನೆಯ ಮೂಲೆಯಲ್ಲಿಟ್ಟು ಪೂಜೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ₹ 1.42 ಕೋಟಿ ಪಡೆದುಕೊಂಡು ಹೋಗಿದ್ದರು.’

‘ಮೊದಲ ಪೂಜೆಯಿಂದ ಸಮಸ್ಯೆಗಳು ಪರಿಹಾರವಾಗಿರಲಿಲ್ಲ. ಆಗ ಜಯಶ್ರೀ, ಎರಡ್ಮೂರು ಬಾರಿ ಆರೋಪಿಗಳನ್ನು ಕರೆಸಿ ವಾಮಾಚಾರ ಮಾಡಿಸಿದ್ದಳು. ಆರೋಪಿಗಳು ಹಂತ ಹಂತವಾಗಿ ಗೀತಾ ಅವರಿಂದ ಒಟ್ಟು ₹ 4.41 ಕೋಟಿ ಪಡೆದುಕೊಂಡಿದ್ದರು. ಆರೋಪಿಗಳು ನೀಡಿದ್ದ 13 ಬ್ಯಾಂಕ್ ಖಾತೆಗಳಿಗೆ ಗೀತಾ ಹಣ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ಹಣ ವಾಪಸು ಕೇಳಿದ್ದಕ್ಕೆ ಜೀವ ಬೆದರಿಕೆ: ‘ವಾಮಾಚಾರ ಮಾಡಿದ ಬಳಿಕವೂ ಸಮಸ್ಯೆಗಳು ಪರಿಹಾರ ಆಗಿರಲಿಲ್ಲ. ಅನುಮಾನಗೊಂಡ ಗೀತಾ, ಪತಿಗೆ ವಿಷಯ ತಿಳಿಸಿದ್ದರು. ಆರೋಪಿಗಳ ಮನೆಗೆ ದಂಪತಿ ಹೋಗಿ ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ನೀಡುವುದಿಲ್ಲವೆಂದು ಹೇಳಿದ್ದ ಆರೋಪಿಗಳು, ದಂಪತಿಗೆ ಜೀವ ಬೆದರಿಕೆಯೊಡ್ಡಿದ್ದರು. ಹಲ್ಲೆ ಸಹ ಮಾಡಿದ್ದರು’ ಎಂದೂ ವಿವರಿಸಿದರು.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ