Breaking News

.ಮದ್ಯ ಸೇವಿಸಿ ಅತಿವೇಗವಾಗಿ ಕಾರು ಚಾಲನೆ,ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು ಅರ್ಧ ಕಿ.ಮೀಗೂ ಹೆಚ್ಚು ದೂರ ಮೃತದೇಹವನ್ನ ಕಾರ್ ಎಳೆದೊಯ್ದಿದೆ..!

Spread the love

ಮಂಡ್ಯ: ಮಂಡ್ಯದ ನಾಗಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಾಗಮಂಗಲ ತಾಲೂಕಿನ ಕಸಲಗೆರೆ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು ಗ್ರಾಮದ ಚಂದ್ರಣ್ಣ(50) ಮೃತ ದುರ್ದೈವಿ.

ಅದೇ ಗ್ರಾಮದ ಬಸವರಾಜು ಅಪಘಾತವೆಸಗಿದ ಪಾನಮತ್ತ ಚಾಲಕ. ಕೆಲಸ ನಿಮಿತ್ತ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದ ಬಸವರಾಜು.. ಬೇರೊಬ್ಬರ ರೇಂಜ್‌ ರೋವರ್ ಕಾರು ತಂದಿದ್ದ ಎನ್ನಲಾಗಿದೆ. ವಾಪಾಸ್ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ನಡೆದಿದೆ ಎಂಬ ಮಾಹಿತಿ ಇದೆ.

ಮದ್ಯ ಸೇವಿಸಿ ಅತಿವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಚಂದ್ರಣ್ಣ ಎಂಬುವರಿಗೆ ರೇಂಜ್ ರೋವರ್ ಕಾರ್ ಡಿಕ್ಕಿಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು ಅರ್ಧ ಕಿ.ಮೀಗೂ ಹೆಚ್ಚು ದೂರ ಮೃತದೇಹವನ್ನ ಕಾರ್ ಎಳೆದೊಯ್ದಿದೆಯಂತೆ.

ಸದ್ಯ ಪಾನಮತ್ತ ಚಾಲಕ ಪೊಲೀಸರ ವಶಕ್ಕೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮಾಲೀಕತ್ವದ ಕಾರ್ ಎನ್ನಲಾಗ್ತಿದೆ.. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ