ಬೆಳಗಾವಿ; ಮಾಜಿ ಶಾಸಕ, ಬಿಜೆಪಿ ನಾಯಕ ಸಂಜಯ್ ಪಾಟೀಲ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ನೀಡಿರುವ ಅವಹೆಳನಕಾರಿ ಹೇಳಿಕೆಯನ್ನು ಇಡೀ ಪಂಚಮಸಾಲಿ ಸಮಾಜ ಖಂಡಿಸುತ್ತದೆ, ತಕ್ಷಣ ಸಂಜಯ್ ಪಾಟೀಲ್ ಕ್ಷಮೆಯಾಚಿಸಬೇಕು ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ಅವಹೇಳಕಾರಿ, ಅಸಹನೀಯ ಶಬ್ದ ಬಳಸಿ ಅವಮಾನಿಸಿರುವುದನ್ನು ಇಡೀ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೇಳಿಕೆ ಪುನರಾವರ್ತನೆಯಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜಕೀಯ ಟೀಕೆ-ಟಿಪ್ಪಣಿ ಏನೇ ಮಾಡಲಿ ಆದರೆ ವ್ಯಕ್ತಿಗತ ಟೀಕೆ ಮಾಡುವುದು ಸರಿಯಲ್ಲ. ಸಂಜಯ್ ಪಾಟೀಲ್ ಅವರ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ, ಇದು ನಮ್ಮ ಇಡೀ ಸಮಾಜದ ಮಹಿಳೆಗೆ ತೋರಿದ ಅಗೌರವ. ಸಂಜಯ್ ಪಾಟೀಲ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪಂಚಮಸಾಲಿ ಸಮುದಾಯದ ಮುಖಂಡರಾದ ಶಿವಪುತ್ರ ಫಟಕಲ್ ಧರೆಪ್ಪ ಠಕ್ಕನ್ನವರ, ರಾಜು, ರಾಮನಗೌಡ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
Laxmi News 24×7