ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಕೇಂದ್ರ ಸರ್ಕಾರದ ಬಳಿ 40,000 ಕೋಟಿ ಆರ್ಥಿಕ ಸಹಾಯವನ್ನು ಕೇಳಿದೆ. ಅದರಲ್ಲಿ ಅರ್ಧದಷ್ಟು ಅಲ್ಪಾವಧಿಯ ಸಾಲವನ್ನು ತೆರವುಗೊಳಿಸಲು ಸವರನ್ ಖಾತರಿಯ ರೂಪದಲ್ಲಿ ಅಗತ್ಯವಿದೆ ಎಂದು ಸರ್ಕಾರವನ್ನು ಸಂಪರ್ಕಿಸಿದೆ.
ಈ ಕುರಿತು ಪಿಟಿಐಗೆ ಮಾತನಾಡಿದರುವ ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರ್ವಾರ್ ”ಕಂಪನಿಗೆ ಯಾವುದೇ ಹೆಚ್ಚುವರಿ ಸಾಲದ ಅಗತ್ಯವಿಲ್ಲ ಮತ್ತು ಕಾರ್ಯಾಚರಣೆಯನ್ನು ಬೆಂಬಲಿಸಲು ಅದರ ವ್ಯವಹಾರವು ಸ್ವಾವಲಂಬಿಯಾಗಿದೆ” ಎಂದು ತಿಳಿಸಿದ್ದಾರೆ.
ಮಾತನ್ನು ಮುಂದುವರಿಸಿದ ಪುರ್ವಾರ್ ” ನಮಗೆ ಯಾವುದೇ ಹೆಚ್ಚುವರಿ ಸಾಲದ ಅಗತ್ಯವಿಲ್ಲ. ನಮ್ಮ ಅಲ್ಪಾವಧಿಯ ಸಾಲವನ್ನು ಮರುಪಾವತಿಸಲು ಮತ್ತು ದೀರ್ಘಾವಧಿಯ ಬಾಂಡ್‌ಗಳನ್ನು ನೀಡಲು ನಾವು 20,000 ಕೋಟಿ ಸವರನ್ ಖಾತರಿಯನ್ನು ಕೇಳಿದ್ದೇವೆ. ನಾವು 1 ಲಕ್ಷ ನೋಡ್ ಬಿ (ಮೊಬೈಲ್ ಸೈಟ್‌ಗಳು) ಅನ್ನು ಮೊಬೈಲ್ ನೆಟ್‌ವರ್ಕ್ ರೋಲ್‌ಔಟ್‌ಗಾಗಿ ಸ್ಥಾಪಿಸಬೇಕಾದರೆ ನಮಗೆ 20,000 ಕೋಟಿ ರೂಪಾಯಿಗೆ ಬೇಕಾಗುತ್ತದೆ, “ಎಂದು ಪುರ್ವಾರ್ ಹೇಳಿದರು.
ಬಿಎಸ್‌ಎನ್‌ಎಲ್ ಸಿಎಂಡಿ ಅವರು ಸರ್ಕಾರವನ್ನು ಸಂಪರ್ಕಿಸಿರುವ ಕುರಿತಾಗಿ ವಿಚಾರವನ್ನ ದೃಢಪಡಿಸಿದ್ದಾರೆ. ಇದು 2019 ರಲ್ಲಿ ಘೋಷಿಸಿದ 69,000 ಕೋಟಿ ಪರಿಹಾರ ಪ್ಯಾಕೇಜ್ ಮೀರಿದಂತಾಗಿದೆ.
ಪ್ರಸ್ತುತ, ಬಿಎಸ್‌ಎನ್‌ಎಲ್ 30,000 ಕೋಟಿ ರೂಪಾಯಿ ಸಾಲದ ಹೊರೆ ಹೊಂದಿದ್ದು, ಇತರೆ ಟೆಲಿಕಾಂ ವಲಯಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ.
ಬಿಎಸ್‌ಎನ್‌ಎಲ್‌ನೊಂದಿಗೆ ವಿಲೀನಗೊಳ್ಳಲು ಉದ್ದೇಶಿಸಿರುವ ಎಂಟಿಎನ್‌ಎಲ್‌ನ ಕುರಿತಾಗಿ ಸರ್ಕಾರವು ಈಗಾಗಲೇ ಬಿಎಸ್‌ಎನ್‌ಎಲ್‌ಗೆ ದೆಹಲಿ ಮತ್ತು ಮುಂಬೈನಲ್ಲಿ ಮೊಬೈಲ್ ವ್ಯವಹಾರ ನಡೆಸಲು ಅನುಮತಿ ನೀಡಿದೆ. ಇದನ್ನು ಮೊದಲು ಎಂಟಿಎನ್‌ಎಲ್ ನಿರ್ವಹಿಸುತ್ತಿತ್ತು.
ಸರ್ಕಾರವು ಅಕ್ಟೋಬರ್ 2019 ರಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಗೆ ಸುಮಾರು 69,000 ಕೋಟಿಗಳ ಪುನರುಜ್ಜೀವನ ಪ್ಯಾಕೇಜ್ ಅನ್ನು ನೀಡಿತ್ತು, ಇದು ಎರಡೂ ಟೆಲಿಕಾಂ ಸಂಸ್ಥೆಗಳ ಪಿಎಸ್‌ಯುಗಳು ತಮ್ಮ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿತು.
ಅಧಿಕೃತ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ನಷ್ಟವು 2019-20ರಲ್ಲಿ 15,500 ಕೋಟಿಯಿಂದ 2020-21ರಲ್ಲಿ 7,441 ಕೋಟಿ ರೂಪಾಯಿಗೆ ಕಡಿಮೆಯಾಗಿದೆ.