Breaking News

ಮಂಡ್ಯದಲ್ಲಿ ಮಹಾಮಳೆ; ಸಂಪೂರ್ಣ ಜಲಾವೃತವಾದ ಕೆ.ಆರ್.ಪೇಟೆ ಬಸ್​ಸ್ಟ್ಯಾಂಡ್

Spread the love

ಮಂಡ್ಯ: ಮಂಡ್ಯ ಜಿಲ್ಲೆಯ ಹಲವೆಡೆ ಭರ್ಜರಿ‌ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಬಸ್ ಗಾಗಿ ಕಾದುಕುಳಿತಿದ್ದ ಪ್ರಾಮಾಣಿಕರು ಪರದಾಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಮಕ್ಕಳು, ಗರ್ಭಿಣಿಯರು ಸೇರಿದಂತೆ ನೂರಾರು ಪ್ರಯಾಣಿಕರು ಸಿಲುಕಿದ್ದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.

ಬಸ್ ನಿಲ್ದಾಣ ಇಳಿಜಾರಿನಲ್ಲಿದೆ. ಹೀಗಾಗಿ ಸತತ ಒಂದೂವರೆ ಗಂಟೆಯಿಂದ ಸುರಿದ ಭರ್ಜರಿ ಮಳೆಗೆ ಬಸ್ ನಿಲ್ದಾಣ ಜಲಾವೃತವಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಶಿವಮೂರ್ತಿ ದೌಡಾಯಿಸಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಈ ರೀತಿ ಮಳೆ‌ ನೀರು ನುಗ್ಗಿದೆ ಎನ್ನಲಾಗಿದ್ದು ಅವ್ಯವಸ್ಥೆ ಕುರಿತು ತಹಶೀಲ್ದಾರ್​ಗೆ ಸಾರ್ವಜನಿಕರು ಮಾಹಿತಿ ತಿಳಿಸಿದ್ದಾರೆ. ಜೆಸಿಬಿ‌ ಮೂಲಕ ಬಸ್ ನಿಲ್ದಾಣದಿಂದ ನೀರು ಹೊರಹಾಕುವ ಕೆಲಸ ನಡೆಯುತ್ತಿದೆ.

 

ತಹಶೀಲ್ದಾರ್ ಶಿವಮೂರ್ತಿ ಈ ಕುರಿತುಪ್ರತಿಕ್ರಿಯೆ ನೀಡಿದ್ದು ಏಳು ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ರು..ಎಲ್ಲರನ್ನು ರಕ್ಷಣೆ ಮಾಡಲಾಗಿದೆ.. ಅಗ್ನಿಶಾಮಕದಳ, ಪೊಲೀಸ್ ಇಲಾಖೆ, ತಾಲೂಕು ಆಡಳಿತದಿಂದ ರಕ್ಷಣೆ ಮಾಡಲಾಗಿದೆ.. ಅರ್ಧಗಂಟೆಯಲ್ಲಿ ನೀರು ಕಂಟ್ರೋಲ್‌ ಆಗುತ್ತೆ..ಅತಿಯಾದ ಮಳೆಯಿಂದ ಈ ಘಟನೆಯಾಗಿದೆ.. 50 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಈ ರೀತಿ ಮಳೆಯಾಗಿದೆ. ಬಸ್ ಸ್ಟ್ಯಾಂಡ್ ಸ್ಥಳದ ಹಿಂದೆ ಕಟ್ಟೆಯಾಗಿತ್ತು.. ಮೂರುಗಂಟೆ ಸತತವಾಗಿ ಮಳೆ ಸುರಿದ ಹಿನ್ನಲೆ ನೀರು ನುಗ್ಗಿದ ಎಂದಿದ್ದಾರೆ.


Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ