Breaking News

ದಲ್ಲಾಳಿಯ ಪುತ್ರನಿಗೆ ಹಿಗ್ಗಾಮುಗ್ಗ ಥಳಿಸಿದ ವ್ಯಾಪಾರಿಗಳು

Spread the love

ಗದಗ: ಕ್ಷುಲ್ಲಕ ಕಾರಣಕ್ಕಾಗಿ ದಲ್ಲಾಳಿ ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾರಾಮಾರಿ ನಡೆದಿದ್ದು ಗದಗ ಎಪಿಎಂಸಿ ಆವರಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಗದಗ ಎಪಿಎಂಸಿ ತರಕಾರಿ ಹೋಲ್ ಸೇಲ್ ಮಾರ್ಕೆಟ್​ನಲ್ಲಿ ಘಟನೆ ನಡೆದಿದ್ದು ದಲ್ಲಾಳಿ ಅಂಗಡಿಗೆ ನುಗ್ಗಿ ದಲ್ಲಾಳಿ ಪುತ್ರನಿಗೆ ವ್ಯಾಪಾರಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ.

ರೈತರ ತರಕಾರಿ ಖರೀದಿ ವಿಷಯದಲ್ಲಿ ದಲ್ಲಾಳಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಹೊಎದಾಟ ನಡೆದಿದೆ ಎನ್ನಲಾಗಿದೆ. ದಲ್ಲಾಳಿಗಳು ಹಾಗೂ ತರಕಾರಿ ಚಿಲ್ಲರೆ ವ್ಯಾಪಾರಿಗಳು ಪರಸ್ಪರ ಹೊಡೆದಾಟ ನಡೆಸಿಕೊಂಡಿದ್ದಾರೆ.ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಾಡಿ ನೂಕಾಡಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ