Breaking News

ತನ್ನ ಬೊಜ್ಜು ಹೊಟ್ಟೆಯಿಂದ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ

Spread the love

ವ್ಯಕ್ತಿಯೊಬ್ಬ ತನ್ನ ಬೊಜ್ಜು ಹೊಟ್ಟೆಯಿಂದಾಗಿ ಚಿಕ್ಕ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ.

28 ವರ್ಷದ ಲಿಯು ಎಂಬ ವ್ಯಕ್ತಿ ಚೀನಾದ ಹೆನಾನ್ ಪ್ರಾಂತದ ಫುಲಿಯುಡಿಯನ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾನೆ. ಮನೆಯ ಮುಂದೆ ಇದ್ದ ಬಾವಿಯ ಮೇಲೆ ಹೊದಿಸಲಾಗಿದ್ದ ಸಣ್ಣ ಮರದ ಹಲಗೆ ಮುರಿದ ಕಾರಣದಿಂದಾಗಿ ಆ ಯುವಕ ಬಾವಿಯೊಳಗೆ ಸಿಲುಕಿಕೊಂಡಿದ್ದಾನೆ.

ಅದೃಷ್ಟವಶಾತ್ ಬಾವಿಯ ಅಗಲ ಚಿಕ್ಕದಿದ್ದು ಯುವಕನ ಹೊಟ್ಟೆ ಬಾವಿ ಅಗಲಕ್ಕಿಂತ ದೊಡ್ಡದಾಗಿದ್ದರಿಂದ ಯುವಕ ಬಾವಿಯಲ್ಲಿ ಮುಳುಗುವ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ, ಐದು ಜನರ ಅಗ್ನಿಶಾಮಕ ದಳದ ತಂಡವು, ಬಾವಿಗೆ ಸಿಕ್ಕಿ ಹಾಕಿ ಕೊಂಡಿದ್ದ ಯುವಕನ ಸೊಂಟದ ಸುತ್ತಲೂ ಹಗ್ಗವನ್ನು ಕಟ್ಟಿ, ಅಂತಿಮವಾಗಿ ಅವನನ್ನು ಬಾವಿಯಿಂದ ಮೇಲೆತ್ತುವ ಸಾಹಸದಲ್ಲಿ ಯಶಸ್ವಿಯಾಗಿದ್ದಾರೆ. ಯುವಕನ ಹೊಟ್ಟೆ ತುಂಬಾ ದಪ್ಪವಾಗಿರುವುದರಿಂದ ಆತ ಬಾವಿಯಲ್ಲಿ ಮುಳುಗಿ ಸಾವನ್ನಪ್ಪುವುದು ತಪ್ಪಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.


Spread the love

About Laxminews 24x7

Check Also

ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌

Spread the love ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್​ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್​ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ