Breaking News

ರಾಷ್ಟ್ರ, ರಾಷ್ಟ್ರೀಯತೆ, ಆರ್‍ಎಸ್‍ಎಸ್ ಒಂದೇ : ಬೊಮ್ಮಾಯಿ

Spread the love

ಬೆಂಗಳೂರು : ರಾಷ್ಟ್ರ, ರಾಷ್ಟ್ರೀಯತೆ, ಆರ್‍ಎಸ್‍ಎಸ್ ಇವೆಲ್ಲಾ ಒಂದೇ. ಆರ್‍ಎಸ್‍ಎಸ್ ಅಂದ್ರೆ ರಾಷ್ಟ್ರೀಯತೆ.

ರಾಷ್ಟ್ರೀಯ ಶಿಕ್ಷಣ ಪಾಲಿಸಿ, ಆರ್‍ಎಸ್‍ಎಸ್ ಇದ್ರೂ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಇಂದು ಅಧಿವೇಶದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಬಿಜೆಪಿ-ಕಾಂಗ್ರೆಸ್ ಶಾಸಕರ ಮಧ್ಯೆ ವಾಗ್ಯುದ್ಧ ನಡೆಯಿತು..

ಕಾಂಗ್ರೆಸ್ ಸದಸ್ಯರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾಗ್ಪುರ ಶಿಕ್ಷಣ ನೀತಿ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಗದ್ದಲದ ಮಧ್ಯೆಯೇ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ರಾಷ್ಟ್ರ, ರಾಷ್ಟ್ರೀಯತೆ, ಆರ್‍ಎಸ್‍ಎಸ್ ಇವೆಲ್ಲಾ ಒಂದೇ. ಆರ್‍ಎಸ್‍ಎಸ್ ಅಂದ್ರೆ ರಾಷ್ಟ್ರೀಯತೆ.

ರಾಷ್ಟ್ರೀಯ ಶಿಕ್ಷಣ ಪಾಲಿಸಿ, ಆರ್‍ಎಸ್‍ಎಸ್ ಇದ್ರೂ ತಪ್ಪಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಲು, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ನೀತಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಅಲ್ಲದೆ ಕಾಂಗ್ರೆಸ್ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೊಮ್ಮಾಯಿ, ಬದಲಾವಣೆಗೆ ನೀವು ತಯಾರಿಲ್ಲ.

ಇದೊಂದು ಉತ್ತಮ ನೀತಿಯಾಗಿದೆ. ಭಾರತೀಯರಿಗಾಗಿ, ಭಾರತೀಯರಿಗೋಸ್ಕರ, ಭಾರತೀಯರ ಭವಿಷ್ಯಕ್ಕಾಗಿ, ಭಾರತೀಯ ಮಕ್ಕಳ ಭವಿಷ್ಯಕ್ಕಾಗಿ ಮಾಡಿದ ನೀತಿ ಇದಾಗಿದೆ ಎಂದರು.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ