ಮುಂಬೈ: ಅಪ್ರಾಪ್ತ ಬಾಲಕಿ ಮೇಲೆ 8 ತಿಂಗಳಿಂದ ಕಾಮುಕರು ಅಟ್ಟಹಾಸ ಮೆರೆದು ನೀಚ ಕೃತ್ಯವೆಸಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಬೆಳಕಿಗೆ ಬಂದಿದೆ.
8 ತಿಂಗಳಿಂದ 15 ವರ್ಷದ ಬಾಲಕಿ ಮೇಲೆ 33 ಜನರಿಂದ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದ್ದು, ಬಾಲಕಿ ಕೊಟ್ಟಿರುವ ದೂರಿನ ಆಧಾರದ ಮೇಲೆ 26 ಜರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು ಎಂದು ತಿಳಿದುಬಂದಿದೆ.
ಬಾಲಕಿ, ಕಿರಾತಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ ಸಲುಗೆಯಿಂದ ಜಾಲತಾಣಗಳಲ್ಲಿ ಖಾಸಗಿ ಫೋಟೋ ಹಂಚಿಕೊಂಡಿದ್ದಾಳೆ. ಈ ಫೋಟೋಗಳನ್ನೇ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಕಾಮುಕರು ವಿವಿಧ ಸ್ಥಳಗಳಲ್ಲಿ ಯುವತಿಯ ಮೇಲೆ ಹಲವು ತಿಂಗಳಿಂದ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Laxmi News 24×7