Breaking News

ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ಪ ಪವರ್ ಹಾಗೂ ಟವರ್ ಎರಡರದ್ದು ಸಮಸ್ಯೆ

Spread the love

ಶಿವಮೊಗ್ಗ : ಆನ್‍ಲೈನ್ ಶಿಕ್ಷಣಕ್ಕೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಎದುರಾಗಿದೆ. ಆನ್‍ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಈ ಎರಡೂ ಅತೀ ಮುಖ್ಯವಾಗಿದೆ. ಆದ್ರೆ ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡರದ್ದು ಸಮಸ್ಯೆ ಇದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಬಗ್ಗೆ ಒಲವು ತೋರುತ್ತಿಲ್ಲ. ನೆಟ್ ವರ್ಕ್ ಸಿಗಬೇಕು ಅಂದ್ರೆ ಊರಿಂದ ಆಚೆ ಹೋಗಬೇಕಿದೆ.

ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಎಲ್ಲಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಈ ಮಹಾಮಾರಿಯಿಂದ ಮಕ್ಕಳ ಶೈಕ್ಷಣಿಕ ಕಲಿಕೆಯ ಮೇಲೆಯೂ ಪರಿಣಾಮ ಬೀರಿದೆ. ಕೊರೊನಾ ಭಯದಿಂದಾಗಿ ಇದುವರೆಗೂ ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಆದರೆ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸಕಾರ ಇತ್ತೀಚಿಗೆ ಆನ್‍ಲೈನ್ ಕ್ಲಾಸ್ ನ ಮೊರೆ ಹೋಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ವ್ಯವಸ್ಥೆ ವರ್ಕ್ ಔಟ್ ಆಗುತ್ತಿಲ್ಲ ಎಂಬ ಮಾತಿಗೆ ಸಾಕ್ಷಿ ದೊರೆತಿದ್ದು, ಅದೆಷ್ಟೋ ಗ್ರಾಮಗಳಲ್ಲಿ ಮಳೆಗಾಲ ಆಗಿರುವುದರಿಂದಾಗಿ 2 ದಿನಕ್ಕೊಮ್ಮೆ ಕರೆಂಟ್ ಬರುತ್ತಿದ್ದು, ಇದು ಕೂಡ ಸಮಸ್ಯೆಯಲ್ಲೊಂದಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸರ್ಕಾರ, ಸದ್ಯ ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಈ ಆನ್‍ಲೈನ್ ಶಿಕ್ಷಣ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಅನುಕೂಲಕರವಾಗುತ್ತದೆಯೇ ಹೊರತು ಗ್ರಾಮೀಣ ಭಾಗದ ಮಕ್ಕಳಿಗಲ್ಲ.

ಇಂತಹ ಸ್ಥಿತಿಯಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೆಂದಾಳುಬೈಲು ಹೊರತಾಗಿಲ್ಲ. ಕುಂದಾದ್ರಿ ಬೆಟ್ಟದ ಬುಡದಲ್ಲಿ ಇರುವ ಪುಟ್ಟ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಇಲ್ಲಿನ ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುವವರು. ಇವರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಹಿಂದೆ ಮುಂದೆ ನೋಡ್ತಾರೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಆಗದ ಮಾತು. ಮೊಬೈಲ್ ಇದ್ದರೂ ನೆಟ್‍ವರ್ಕ್ ಇಲ್ಲ. ಮೊಬೈಲ್ ಚಾರ್ಜ್ ಮಾಡಲು ಪವರ್ ಇರುವುದಿಲ್ಲ. ಇದು ಇಲ್ಲಿನ ಸಮಸ್ಯೆ. ನಗರ ಭಾಗದ ಬಹುತೇಕ ಪೋಷಕರಿಗೆ ಆನ್‍ಲೈನ್ ಶಿಕ್ಷಣ ಮಾಡಿರುವುದು ಸಂತಸ ತಂದಿದೆ. ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಅನ್ನುವುದಕ್ಕಿಂತ, ಮಕ್ಕಳು ಮನೆಯಲ್ಲಿ ನೀಡುತ್ತಿದ್ದ ಕಾಟದಿಂದ ಬೇಸತ್ತು ಪೋಷಕರು ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪೋಷಕರು ಇದ್ದಾರೆ.


Spread the love

About Laxminews 24x7

Check Also

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಪರಿಸ್ಥಿತಿ ಹೇಗಿರಲಿದೆ ಎಂದು ಕಾದು ನೋಡಿ: ವಿಜಯೇಂದ್ರ

Spread the love ಶಿವಮೊಗ್ಗ: ಲೋಕಸಭೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ