ಮಂಗಳೂರು : ಕೇರಳದ ಕೋಯಿಕ್ಕೊಡ್‌ನಲ್ಲಿ ನಿಫಾ ಸೋಂಕಿಗೆ 13 ವರ್ಷದ ಬಾಲಕ ಮೃತಪಟ್ಟ ವಾರದ ಬಳಿಕ ಇದೀಗ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಸೋಂಕಿನ ಲಕ್ಷಣಗಳು ಕಾಣಿಸಿವೆ. ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರಿಗೆ ನಿಫಾ ಸೋಂಕಿನ ಲಕ್ಷಣಗಳು ಕಾಣಿಸಿದೆ ಎಂದು ಆರೋಗ್ಯ ಆಯುಕ್ತ ಕೆ.ವಿ. ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದಾರೆ.
ಸೋಂಕಿತರ ಸ್ಯಾಂಪಲ್‌ನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ನಾವು ಜಾಗರೂಕರಾಗಿರಬೇಕು. ಆದರೆ ಭಯಪಡುವ ಅವಶ್ಯ ಇಲ್ಲ. ತೀವ್ರ ರೋಗ ಲಕ್ಷಣಗಳು ಅವರಲ್ಲಿ ಕಾಣಿಸಿಲ್ಲ ಎಂದು ತ್ರಿಲೋಕ್ ಚಂದ್ರ ಹೇಳಿದ್ದಾರೆ.
Laxmi News 24×7