ಬೆಂಗಳೂರು, ಆ.13- ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೊಲೀಸರಿಗೆ ನೀಡುವ ಗಣ್ಯ ಪ್ರಶಸ್ತಿಗೆ ರಾಜ್ಯದ ನಾಲ್ವರು ಅಕಾರಿಗಳು ಪಾತ್ರರಾಗಿದ್ದಾರೆ.
ಉತ್ತಮ ತನಿಖೆಗಾಗಿ ಕೇಂದ್ರ ಗೃಹ ಸಚಿವರ ಗೌರವಾನ್ವಿತ ಪ್ರಶಸ್ತಿಗೆ ಡಿವೈಎಸ್‍ಪಿ ದರ್ಜೆಯ ಇಬ್ಬರು ಅಕಾರಿಗಳು ಸೇರಿದಂತೆ ನಾಲ್ವರಿಗೆ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಮೈಕೋ ಲೇಔಟ್ ಎಸಿಪಿ ಸುದೀರ್ ಎಂ ಹೆಗಡೆ, ರೈಲ್ವೆ ಉಪವಿಭಾಗದ ಡಿವೈಎಸ್‍ಪಿ ಡಿ.ಅಶೋಕ್, ಬೆಂಗಳೂರು ಸಿಸಿಬಿಯ ಪೊಲೀಸ್ ಇನ್ಸ್‍ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು, ಅಶೋಕ್‍ನಗರ ಪೊಲೀಸ್ ಠಾಣೆಯ ಸಿಎಚ್‍ಸಿ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
Laxmi News 24×7