ಗೋಕಾಕ: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪ್ರತಿಭಟನೆ ನಡೆಯುತ್ತಿದ್ದ ಬಸವೇಶ್ವರ ವೃತ್ತದಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಗೆ ತೆರಳಿ ಮನವಿ ನೀಡಲು ಮುಂದಾದ ರೈತರನ್ನು ಪೊಲೀಸರು ಅಲ್ಲಿಯೇ ಘೇರಾವ್ ಹಾಕಿ ತಡೆದರು.
ಮುಂಜಾಗೃತಾ ಕ್ರಮವಾಗಿ ಸಚಿವರ ಮನೆಯ ಸುತ್ತ ಬಿಗಿ ಭದ್ರತೆಯನ್ನು ಪೊಲೀಸರು ಮಾಡಿದ್ದಾರೆ.
ರೈತ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗಿದ ರೈತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದು ಭೂ ಸುಧಾರಣಾ ಕಾಯ್ದೆ ಅಲ್ಲ ಭೂ ಕಬಳಿಕೆ ಕಾಯ್ದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿವಾದಿತ ಭು ಸುದಾರಣೆ ಕಾಯ್ದೆಯ ತಿದ್ದಪಡಿಯನ್ನು ರದ್ದುಪಡಿಸಬೇಕೆ ಎಂದು ರಾಜ್ಯಾದ್ಯಂತ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.