Breaking News

ಅಪ್ಪಾ ಕೇಕ್​ ತಿನ್ನಪ್ಪಾ..ಕೋವಿಡ್​ಗೆ ಬಲಿಯಾದ ತಂದೆ ಸಮಾಧಿ ಬಳಿ ಬರ್ತ್​ ​ಡೇ ಆಚರಿಸಿಕೊಂಡ ಬಾಲಕಿ!

Spread the love

ಕೊಪ್ಪಳ: ತಂದೆಯ ಸಮಾಧಿ ಬಳಿ 8 ವರ್ಷದ ಬಾಲಕಿಯೊಬ್ಬಳು ಕೇಕ್​ ಕತ್ತರಿಸಿ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಬಾಲಕಿಯನ್ನ ಕಂಡು ಮರುಕು ವ್ಯಕ್ತಪಡಿಸುತ್ತಿದ್ದಾರೆ.

ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಬರ್ತ್ ಡೇ ಪ್ರಯುಕ್ತ ತಂದೆಯ ಸಮಾಧಿ ಮುಂದೆ ಕೇಕ್​ ಕತ್ತರಿಸಿದ್ದಾಳೆ. ಸ್ಪಂದನಾಳ ತಂದೆ ಮಹೇಶ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕರೊನಾ ಸೋಂಕಿಗೆ ಬಲಿಯಾಗಿದ್ದರು.

 

 

ತಂದೆ ಕೋವಿಡ್​ನಿಂದ ಮೃತಪಟ್ಟು ಮಣ್ಣಲ್ಲಿ ಮಣ್ಣಾಗಿದ್ದರೂ, ಇವರ ಮಗಳು ಆ ಸಮಾಧಿಗೇ ಕೇಕ್ ಅನ್ನು ತಿನ್ನಿಸುವ ರೀತಿ ಅರ್ಪಿಸಿದ್ದಾಳೆ. ಈ ದೃಶ್ಯ ​ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೂರಿ ಕರೊನಾಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ. ಪುಟ್ಟ ಕಂದನನ್ನು ತಂದೆಯಿಂದ ದೂರ ಮಾಡಿದ ದುರ್ವಿಧಿಗೂ ಮನದಲ್ಲೇ ಶಪಿಸುತ್ತಿದ್ದಾರೆ.


Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ