ಬಳ್ಳಾರಿ: ಪಿಎಚ್‍ಡಿ ವ್ಯಾಸಂಗ ಮಾಡುವುದು ಬೇಡ ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ.

ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಯು.ಎನ್. ಪೂಜಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪೂಜಾ ಎಂ.ಎಸ್ಸಿ ಮುಗಿಸಿಕೊಂಡು ಬಿ.ಎಡ್ ಮಾಡುತ್ತಿದ್ದರು. ಈಗ ಪಿಎಚ್‍ಡಿ ಮಾಡುವುದದಾಗಿ ತಂದೆಯೊಂದಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ತಂದೆ ನಾಗರಾಜ್, ಪಿಎಚ್‍ಡಿ ಮಾಡುವುದು ಬೇಡ ಎಂದು ಹೇಳಿದ್ದಾರೆ.ತಂದೆ ಪಿಎಚ್‍ಡಿ ಮಾಡುವುದು ಬೇಡ ಎಂದಿದ್ದಕ್ಕೆ ಬೇಸರದಿಂದ ಪೂಜಾ ತನ್ನ ರೂಂ ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ತುಂಬಾ ಹೊತ್ತಿನ ಬಳಿಕ ರೂಂ ನಿಂದ ಪೂಜಾ ಹೊರಗಡೆ ಬರದೆ ಇದ್ದದನ್ನು ಗಮನಿಸಿ, ಬಾಗಿಲು ಒಡೆದು ಒಳಪ್ರವೇಶಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7