ಶಿವಮೊಗ್ಗ : ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ಇಸ್ಕಾನ್ ಮಂದಿರದಲ್ಲಿ ಕೃಷ್ಣನ ತೊಟ್ಟಿಲು ತೂಗಿ ಭಜನೆ ಮಾಡಿ ಗಮನ ಸೆಳೆದಿದ್ದಾರೆ.
ಗೋವಿಂದ ಗುರುಹರಿ ಗೋಪಾಲು ಬೋಲೊ ಎಂದು ಭಜನೆ ಮಾಡುವ ಮೂಲಕ ಕೃಷ್ಣನ ನಾಮಸ್ಮರಣೆ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಬಿದರೆಯ ಇಸ್ಕಾನ್ ಮಂದಿರದಲ್ಲಿ ಇಂದು ನಡೆದ ಕೃಷ್ಣನ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾದ ಸಚಿವರು, ಕೃಷ್ಣನ ತೊಟ್ಟಿಲು ತೂಗುವ ಮೂಲಕ ತಮ್ಮ ಭಕ್ತಿಯನ್ನು ಕೃಷ್ಣನಿಗೆ ಸಮರ್ಪಿಸಿದ್ದಾರೆ. ನಂತರ ಭಕ್ತರ ಜೊತೆ ಮೈಕ್ ಹಿಡಿದು ಕೃಷ್ಣನ ಭಜನೆ ಮಾಡಿದ್ದಾರೆ.ಸಚಿವರು ಆಧ್ಯಾತ್ಮಿಕ ವಿಚಾರದಲ್ಲಿ ಹೆಚ್ಚಾಗಿ ತೂಡಗಿಸಿಕೊಳ್ಳುತ್ತಾರೆ. ಅದೇ ರೀತಿ ಇಂದು ಸಹ ಕೃಷ್ಣನ ಭಜನೆಯನ್ನು ಭಕ್ತರ ಜೊತೆ ಮಾಡಿದ್ದು ವಿಶೇಷವಾಗಿತ್ತು ಎನ್ನಬಹುದು. ಈ ವೇಳೆ ಇಸ್ಕಾನ್ ನ ಆಡಳಿತ ಮಂಡಳಿಯವರು ಹಾಜರಿದ್ದರು.