Breaking News

ಅಯ್ಯೋ ಮಗನೇ ಬೇಡ ಬೇಡ ಅಂದ್ರೂ ಸಿನಿಮಾ ಫೀಲ್ಡ್​ಗೆ ಹೋಗಿ ಅಲ್ಲೇ ಕೊನೆಯುಸಿರೆದು ಬಿಟ್ಟಲ್ಲೋ

Spread the love

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸೋಮವಾರ ಫೈಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈತ ಹೆತ್ತಮ್ಮನ ಮಾತು ಕೇಳಿದ್ದರೆ ಇಷ್ಟು ಬೇಗ ಸಾಯುತ್ತಿರಲಿಲ್ಲವೇನೋ…

ಮಗನ ಸಾವಿನ ಸುದ್ದಿ ಕೇಳಿ ವಿವೇಕ್​ರ ತಾಯಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಆಕ್ರಂದಿಸುತ್ತಿದ್ದ ದೃಶ್ಯ ನೋಡಿದ್ರೆ ಎಂಥವರ ಮನದಲ್ಲೂ ಈ ಪ್ರಶ್ನೆ ಮೂಡುತ್ತಿತ್ತು. ‘ನಾನು ನಿನ್ನೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಮನೆಗೆ ಬಂದೆ. ಇಂದು ಬೆಳಗ್ಗೆ ನಾನಿನ್ನೂ ಮಲಗಿದ್ದೆ, ನನ್ನ ಮಗ ನನ್ನನ್ನು ನಿದ್ರೆಯಿಂದ ಎದ್ದೇಳಿಸೋದು ಬೇಡ ಅಂತ ಹೇಳದೆ ಶೂಟಿಂಗ್​ಗೆ ಹೋಗಿದ್ದ. ಅವನು ಬದುಕಿದ್ದಾಗ ‘ಅಮ್ಮ ನಿನ್ನನ್ನು ಚೆನ್ನಾಗಿ ಸಾಕ್ತೀನಿ’ ಅಂತಿದ್ದ. ಈಗ ಅವನೇ ಇಲ್ಲ! ನಾನು ಯಾರನ್ನ ಕೇಳಲಿ? ಬೆಳಗ್ಗೆ ಇದ್ದ ಮಗ, ಈಗ ಇಲ್ಲ… ಮಗನೇ ನಿನಗೆ ಶೂಟಿಂಗ್ ಸಹವಾಸ ಬೇಡಪ್ಪ… ಎಂದು ಸಾಕಷ್ಟು ಸಲ ಹೇಳಿದ್ದೆ. ರಾಗಿ ಗಂಜಿಯಾದ್ರೂ ಕುಡಿದು ಬದುಕೋಣ, ಆ ಫೀಲ್ಡ್ ಬೇಡ ಅಂದಿದ್ದೆ. ಆದ್ರೆ ಅವನು ಚಿತ್ರೋದ್ಯಮದಲ್ಲೇ ಹೆಸರು ಮಾಡಬೇಕು ಅಂತ ಆಸೆ ಪಟ್ಟಿದ್ದ. ನನ್ನ ಮಾತು ಕೇಳದೆ ನನ್ನನ್ನ ಅನಾಥ ಮಾಡಿ ಹೋಗಿಬಿಟ್ಟ…’ ಎಂದು ಮೃತನ ತಾಯಿ ಸೆಲ್ವಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಇಡೀ‌ ಕುಟುಂಬದ ಜವಾಬ್ದಾರಿಯನ್ನ ಮಗ ವಿವೇಕ್​ ನೋಡ್ಕೋತಾ ಇದ್ದ. ಆತನ ದುಡಿಮೆಯಿಂದಲೇ ಸಂಸಾರ ನಡೀತಾ ಇತ್ತು. ಈಗ ನಮಗೆ ಅನ್ನ ಹಾಕೋರು ಯಾರು? ಅಯ್ಯೋ ಮಗನೇ ಬೇಡ ಬೇಡ ಅಂದ್ರೂ ಸಿನಿಮಾ ಫೀಲ್ಡ್​ಗೆ ಹೋಗಿ ಅಲ್ಲೇ ಕೊನೆಯುಸಿರೆದು ಬಿಟ್ಟಲ್ಲೋ… ಎಂದು ತಾಯಿ ಸೆಲ್ವಿ ರೋಧಿಸುತ್ತಿದ್ದರು.

ನನ್ನ ಮಗ ಸತ್ತಿದ್ದಾನೆ ಎಂದು ವಿವೇಕ್​ರ ಚಿಕ್ಕಪ್ಪ ನಮಗೆ ಫೋನ್​ ಮಾಡಿ ಹೇಳಿದ್ರು. ಈ ಘಟನೆಗೆ ಸಿನಿಮಾ ತಂಡವೇ ಕಾರಣ. ಯಾವುದೇ ರಕ್ಷಣೆ ಇಲ್ಲದೆ ಹೇಗೆ ಸಿನಿಮಾ ಮಾಡಲು ಹೋದ್ರು? ಅಮಾಯಕರ ಜೀವದ ಜತೆ ಚೆಲ್ಲಾಟವಾಡ್ತಿದ್ದಾರೆ. ವಿವೇಕ್ ಅವರ ಚಿಕ್ಕಪ್ಪ ಶೂಟಿಂಗ್​ನಲ್ಲಿ ಕೆಲಸ ಮಾಡ್ತಾರೆ. ಈ ಘಟನೆ ಆದಾಗ ಅವರು ಅಲ್ಲೇ ಇದ್ರು… ಎಂದು ಕಣ್ಣೀರಿಟ್ಟರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ