Breaking News

ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್‌ಗೆ ಸಂಕಟ: ಬಂಧನ ಖಾಯಂ!

Spread the love

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್‌ ಕರಿಶ್ಮಾ ಪ್ರಕಾಶ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಕರಿಶ್ಮಾ ಪ್ರಕಾಶ್ ಸಹ ಆರೋಪಿ ಆಗಿದ್ದು, ಬಂಧನದಿಂದ ಬಚಾವಾಗಲು ಕರಿಶ್ಮಾ ಪ್ರಕಾಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕರಿಶ್ಮಾ ಪ್ರಕಾಶ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ರದ್ದು ಮಾಡಿದೆ. ಹೀಗಾಗಿ ಕರಿಶ್ಮಾಗೆ ಬಂಧನದ ಭೀತಿ ಹೆಚ್ಚಳವಾಗಿದೆ.

ಕಳೆದ ಅಕ್ಟೋಬರ್‌ನಲ್ಲಿಯೇ ನಿರೀಕ್ಷಣಾ ಜಾಮೀನು ಕೋರಿ ಕರಿಶ್ಮಾ ಅರ್ಜಿ ಹಾಕಿದ್ದರು. ಆದರೆ ಎನ್‌ಸಿಬಿ ತಂಡವು ಕರಿಶ್ಮಾಗೆ ನಿರೀಕ್ಷಣಾ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿ ಹಲವು ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟಿತು. ಡಿಫೆನ್ಸ್, ಪ್ರಾಸಿಕ್ಯೂಷನ್ ಎರಡೂ ಪಕ್ಷದವರ ವಾದ ಆಲಿಸಿದ ನ್ಯಾಯಾಧೀಶ ವಿವಿ ವಿದ್ವಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದು ಮಾಡಿದರು. ಆದರೆ ಆಗಸ್ಟ್ 25ರ ಒಳಗಾಗಿ ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಕರಿಶ್ಮಾ ಅರ್ಜಿ ಹಾಕಿಕೊಳ್ಳಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್

ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ತನಿಖೆಯ ವೇಳೆ ಡ್ರಗ್ಸ್ ಪ್ರಕರಣ ಹೊರಗೆ ಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಎನ್‌ಸಿಬಿಯು ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ, ಧರ್ಮ ಪ್ರೊಡಕ್ಷನ್‌ನ ಕ್ಷಿತಿಜ್ ಪ್ರಸಾದ್, ಸುಶಾಂತ್‌ ಸಿಂಗ್‌ನ ಕೆಲವು ಗೆಳೆಯರು, ಮನೆಗೆಲದ ವ್ಯಕ್ತಿ, ಕೆಲವು ಡ್ರಗ್ ಪೆಡ್ಲರ್‌ಗಳು ಹೀಗೆ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಬಂಧಿಸಿತ್ತು.

ಹಲವು ಖ್ಯಾತನಾಮರ ವಿಚಾರಣೆ

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್‌ನ ಹಲವು ಖ್ಯಾತನಾಮರನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಅರ್ಜುನ್ ರಾಮ್‌ಪಾಲ್, ಅರ್ಜುನ್ ರಾಮ್‌ಪಾಲ್ ಪತ್ನಿ ಗೇಬ್ರಿಯಲ್, ಗೇಬ್ರಿಯಲ್‌ಳ ಸಹೋದರ, ಅರ್ಜುನ್ ರಾಮ್‌ಪಾಲ್ ಸಹೋದರಿ ಕೋಮಲ್ ರಾಮ್‌ಪಾಲ್, ನಟಿ ರಾಕುಲ್ ಪ್ರೀತ್ ಸಿಂಗ್, ಕರಣ್ ಜೋಹರ್, ಕಮಿಡಿಯನ್ ಭಾರತಿ ಸಿಂಗ್ ಮತ್ತು ಆಕೆಯ ಪತಿ, ನಿರ್ಮಾಪಕ ಫಿರೋಜ್ ನಾಡಿಯಾವಾಲ, ಟಿವಿ ನಟಿ ಪ್ರೀತಿಕಾ ಚೌಹಾಣ್, ಇನ್ನೂ ಹಲವರು ಸೆಲೆಬ್ರಿಟಿಗಳನ್ನು, ಸುಶಾಂತ್‌ ಸಿಂಗ್ ಗೆಳೆಯರನ್ನು, ಮನೆಗೆಲಸದವರನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ.

ತನಿಖೆ ನಡೆಸುತ್ತಿರುವ ಸಿಬಿಐ

ಬಾಲಿವುಡ್ ನಟ ಸುಶಾಂತ್ ಸಿಂಗ್ ಕಳೆದ ವರ್ಷ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ನಂತರ ಸಾಮಾಜಿಕ ಜಾಲತಾಣದ ತೀವ್ರ ಒತ್ತಡ ಕೇಳಿಬಂದ ಕಾರಣ ಹಾಗೂ ಸುಶಾಂತ್ ಸಿಂಗ್ ತಂದೆ ಬಿಹಾರದಲ್ಲಿ ಪೊಲೀಸ್ ದೂರು ನೀಡಿದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಆರಂಭದಲ್ಲಿ ಸುಶಾಂತ್ ಸಿಂಗ್ ಸಾವಿಗೆ ಗೆಳತಿ ರಿಯಾ ಚಕ್ರವರ್ತಿ ಕಾರಣ ಎನ್ನಲಾಯಿತು. ಇದಕ್ಕೆ ರಿಯಾ ಸಹ ಪ್ರತಿಕ್ರಿಯೆ ನೀಡಿ ಸುಶಾಂತ್ ಸಹೋದರಿ ಮೇಲೆ ಆರೋಪ ಹೊರಿಸಿದರು. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟ ರಿಯಾ 100 ದಿನ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದರು.

ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳ ವಿಚಾರಣೆ

 

ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣ ಹೊರಗೆ ಬಂದ ಸಂದರ್ಭದಲ್ಲಿಯೇ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣವೂ ಹೊರಗೆ ಬಂತು. ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಎನ್‌ಸಿಬಿಯು ಅನಿಕಾ ಎಂಬಾಕೆಯನ್ನು ಬಂಧಿಸಿತು. ಆ ನಂತರ ಸಿಸಿಬಿಯು ತನಿಖೆ ಮುಂದುವರೆಸಿದ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇವರ ಆಪ್ತರಾದ ರವಿಶಂಕರ್, ರಾಹುಲ್, ವಿನೋದ್ ಆಳ್ವಾ, ಡ್ಯಾನ್ಸರ್ ಕಿಶೋರ್ ಶೆಟ್ಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾ ಇನ್ನೂ ಕೆಲವರನ್ನು ಬಂಧಿಸಲಾಯ್ತು. ನಂತರ ನಟ ದಿಗಂತ್, ಐಂದ್ರಿತಾ ರೇ, ಅನುಶ್ರೀ, ಲೂಸ್ ಮಾದ ಯೋಗಿ, ಅಭಿಷೇಕ್, ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ, ನಟ ಅಕುಲ್ ಬಾಲಾಜಿ, ಸಂತೋಷ್, ಶ್ರೇತಾ ಪ್ರಸಾದ್, ರಾಹುಲ್, ಎಸ್ ರವಿಶಂಕರ್, ಗೀತಾ ಭಟ್ ಇನ್ನೂ ಹಲವರನ್ನು ವಿಚಾರಣೆ ಮಾಡಲಾಯ್ತು.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ