Breaking News

ಹಿರಿಯ ನಾಗರಿಕರು, ವಿಕಲಚೇತನರಿಗೆ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

Spread the love

ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಭರಾಟೆಯಾಗಿರುವ ಈ ನಡುವೆ ನಾ ಮುಂದು ತಾ ಮುಂದು ಎಂಬಂತೆ ಕಂಪನಿಗಳು ಇವಿ ವಾಹನಗಳನ್ನು ಲಾಂಚ್‌ ಮಾಡುತ್ತಿವೆ.

ಈ ಸಾಲಿಗೆ ತನ್ನದೊಂದು ವಾಹನ ಬಿಡುಗಡೆ ಮಾಡಿರುವ ಕೋಮಾಕಿ ಎಕ್ಸ್‌ಜಿಟಿ-ಎಕ್ಸ್‌5 ಹೆಸರಿನಲ್ಲಿ ಹಿರಿಯರಿಗೆ ಹಾಗೂ ವಿಕಲಚೇತನರಿಗೆಂದು ವಿಶೇಷ ಸ್ಕೂಟರ್‌ ಹೊರತಂದಿದೆ. ಈ ಸ್ಕೂಟರ್‌ನ ಅಧಿಕೃತ ಲಾಂಚ್‌ ಮುನ್ನ 1000ಕ್ಕೂ ಹೆಚ್ಚು ಗ್ರಾಹಕರಿಗೆ ಮಾರಾಟ ಮಾಡಲಾಗಿದೆ.

ತನ್ನ ಅಧಿಕೃತ ಜಾಲತಾಣದಲ್ಲಿ ಉಚಿತವಾಗಿ ಬುಕ್ ಮಾಡಬಲ್ಲ ಈ ಸ್ಕೂಟರ್‌ ಭಾರತದಲ್ಲಿರುವ ತನ್ನೆಲ್ಲಾ ಡೀಲರ್‌ಗಳ ಬಳಿ ದೊರೆಯುತ್ತದೆ ಎಂದಿರುವ ಕೊಮಾಕಿ ತನ್ನ ಇವಿ ವಾಹನಗಳ ಖರೀದಿಗೆ ಇಎಂಐ ಸೌಲಭ್ಯವನ್ನೂ ಕೊಡಮಾಡುತ್ತಿದೆ.

 

ಕೆಂಪು ಹಾಗೂ ನಸುಗಪ್ಪಿನಲ್ಲಿ ಬರುವ ಕೋಮಾಕಿಯ ಈ ಸ್ಕೂಟರ್‌ ಸದ್ಯಕ್ಕೆ 90,500 ರೂಪಾಯಿ (ಎಕ್ಸ್‌ ಶೋರೂಂ) ಹಾಗೂ ಮತ್ತೊಂದು ಮಾಡೆಲ್‌ 72,500 ರೂಪಾಯಿಯ ಬೆಲೆ ಹೊಂದಿದೆ.

ಒಮ್ಮೆ ಚಾರ್ಜ್ ಮಾಡಿದರೆ 80-90 ಕಿಮೀ ದೂರ ಕ್ರಮಿಸುವ ಕ್ಷಮತೆಯನ್ನು ಈ ಸ್ಕೂಟರ್‌ ಹೊಂದಿರುವುದಾಗಿ ಕೊಮಾಕಿ ಹೇಳಿದ್ದು, ವಿಆರ್‌ರಲ್‌ಎ ಜೆಲ್ ಹಾಗೂ ಲಿಥಿಯಮ್ ಐಯಾನ್ ಬ್ಯಾಟರಿಗಳೆರಡರ ಮೇಲೂ ಚಲಿಸಬಲ್ಲದಾಗಿದೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ