Breaking News

ಪ್ರಬಲ ಖಾತೆ ಮೇಲೆ ಹಿರಿಯರ ಕಣ್ಣು

Spread the love

ಬೆಂಗಳೂರು: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಪ್ರಮುಖ ಖಾತೆಗಳ ಮೇಲೆ ಹಿರಿಯ ಸಚಿವರ ಕಣ್ಣು ಬಿದ್ದಿದೆ. ಪ್ರಭಾವಿ ಖಾತೆಗಳಿಗಾಗಿ ಸಿಎಂ ಬಳಿ ಬೇಡಿಕೆ ಇರಿಸಿದ್ದು, ಬಹುತೇಕ ಶುಕ್ರವಾರ ಸಚಿವರಿಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ.

ಗೃಹ, ಇಂಧನ, ಕಂದಾಯ, ಆರ್‌ಡಿಪಿಆರ್‌, ಬೃಹತ್‌ ಕೈಗಾರಿಕೆ, ಬೆಂಗ ಳೂರು ನಗರಾಭಿವೃದ್ಧಿ, ಜಲ ಸಂಪನ್ಮೂಲ ಖಾತೆಗಳ ಮೇಲೆ ಹಿರಿಯ ಸಚಿವರು ನಿರೀಕ್ಷೆ ಇರಿಸಿ ದ್ದಾರೆ. ಬಿಎಸ್‌ವೈ ಸರಕಾರದಲ್ಲಿ ಸಚಿವರಾಗಿದ್ದವರಿಗೆ ಅದೇ ಖಾತೆ  ಗಳನ್ನು ನೀಡುವಂತೆ ಪಕ್ಷದ ವರಿಷ್ಠರು ಸಲಹೆ ನೀಡಿ ದ್ದಾರೆ ಎಂಬ ಮಾಹಿತಿ ಲಭ್ಯ ವಾಗಿದೆ.

ಈಶ್ವರಪ್ಪ ಗೃಹ ಖಾತೆಗೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ. ಆರ್‌. ಅಶೋಕ್‌ ಗೃಹ ಅಥವಾ ಬೆಂಗ ಳೂರು ನಗರಾಭಿವೃದ್ಧಿಗೆ ಬೇಡಿಕೆ ಇರಿಸಿದ್ದಾರೆ. ಉಮೇಶ್‌ ಕತ್ತಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂ. ರಾಜ್‌ ಅಥವಾ ಕಂದಾಯ ಖಾತೆ ದೊರೆಯುವ ನಿರೀಕ್ಷೆ ಯಲ್ಲಿದ್ದು, ನಿರಾಣಿ ಬೃಹತ್‌ ಕೈಗಾರಿಕೆಯ ನಿರೀಕ್ಷೆ ಯಲ್ಲಿದ್ದಾರೆ. ವಿ. ಸೋಮಣ್ಣ ಕೂಡ ಆರ್‌ಡಿ ಪಿಆರ್‌ ಅಥವಾ ಕಂದಾಯ ಖಾತೆ ದೊರೆಯುತ್ತದೆ ಎಂಬ ವಿಶ್ವಾಸ ದಲ್ಲಿ ದ್ದಾರೆ. ಗೋವಿಂದ ಕಾರಜೋಳ ಲೋಕೋಪ ಯೋಗಿ ಹಾಗೂ ಬಿ. ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮುಂದುವರಿಯಲು ಇಚ್ಛಿಸಿ ದ್ದಾರೆ. ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಹಿಂದಿನ ಖಾತೆಯಲ್ಲಿಯೇ ಮುಂದು ವರಿಯಲು ಆಸಕ್ತಿ ಹೊಂದಿ ದ್ದಾರೆ ಎನ್ನಲಾಗಿದೆ.

ವಲಸಿಗ ಸಚಿವರೂ ಈ ಹಿಂದಿನ ಖಾತೆಗಳಲ್ಲಿಯೇ ಮುಂದುವರಿ ಯಲು ಇಚ್ಛಿಸಿದ್ದಾರೆ ಎನ್ನಲಾಗಿದೆ


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ