ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಾಳೆ (ಜನವರಿ 14) ನಡೆಯಲಿರುವ ಪಾದಯಾತ್ರೆ ರದ್ದಾಗಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಮುರಿಗೇಶ್ ನಿರಾಣಿಯವ್ರಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ, ಪಂಚಮಸಾಲಿ ಪೀಠದಿಂದ ನಡೆಯುವ ಪಾದಯಾತ್ರೆ ರದ್ಧಾಗಿದೆ ಎನ್ನಲಾಯ್ತು. ಅದ್ರಂತೆ, ಮುರುಗೇಶ್ ನಿರಾಣಿಯವ್ರು ಕೂಡ ಶ್ರೀಗಳು ತನ್ನ ಪಾದಯಾತ್ರೆ ನಿರ್ಣಯವನ್ನ ಹಿಂಪಡೆದಿದ್ದಾರೆ ಎಂದು ಹೇಳಿದ್ರು. ಆದ್ರೆ, ಈ ಹೇಳಿಕೆಗೆ
ಕೂಡಲಸಂಗಮದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ಷೇಪ ವ್ಯಕ್ತಪಡೆಸಿದ್ದು, ಮುರುಗೇಶ್ ನಿರಾಣಿ ವಿನಾಕರಣ ಹೇಳಿಕೆ ನೀಡಬಾರದು. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನ ಹಿಂದಿಡುವ ಮಾತೇ ಇಲ್ಲ. ನಾನು ಮುರುಗೇಶ್ ನಿರಾಣಿಯವ್ರಿಗೆ ನೇರವಾಗಿ ಹೇಳುತ್ತಿದ್ದೇನೆ. ಸಂಜೆಯೊಳಗೆ ಮೀಸಾಲಾತಿ ಘೋಷಿಸಿ, ಆಗ ಮಾತ್ರ ನಾವು ಪಾದಯಾತ್ರೆಯನ್ನ ಹಿಂಪಡೆಯುತ್ತೇವೆ ಎಂದರು.
ಅದ್ರಂತೆ, ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಂಜೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿ. ಇಲ್ಲದಿದ್ರೆ, ಪಾದಯಾತ್ರೆ ಮೂಲಕ ಬೆಂಗಳೂರಿಗೆ 2 ಲಕ್ಷಕ್ಕೂ ಅಧಿಕ ಜನ ಬರುವುದು ಖಚಿತ ಎಂದರು.
Laxmi News 24×7