ಗೋಕಾಕ ಶ್ರೀ ಮಹಾಲಕ್ಷ್ಮೀ ಬ್ಯಾಂಕಿನ ಗ್ರಾಹಕರಿಗೆ ಸಿಹಿ.ಸುದ್ದಿ
ಶ್ರೀ ಮಹಾಲಕ್ಷ್ಮೀ ಬ್ಯಾಂಕ್ 87 ಕೋಟಿ.ರೂ ಮರಳಿ ಗ್ರಾಹಕರ ಖಾತೆಗೆ ನುಡಿದಂತೆ ನಡೆದ ಶಾಸಕರಾದ ರಮೇಶ ಜಾರಕಿಹೊಳಿ
ಗೋಕಾಕ ನಗರದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೊ ಆಪರೇಟಿವ್ ಕ್ರೆಡಿಟ್ ಬ್ಯಾಂಕ.ಲಿ ಗೋಕಾಕ ಬ್ಯಾಂಕಿನ ಎಲ್ಲಾ ಗ್ರಾಹಕರು ವಿಶೇಷವಾಗಿ ಠೇವಣಿದಾರರಿಗೆ ಸಿಹಿ ಸುದ್ದಿ..
ಗೋಕಾಕ ಮತಕ್ಷೇತ್ರದ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರ ಅವಿರತ ಪ್ರಯತ್ನದಿಂದ ಡಿ.ಐ.ಸಿ.ಜಿಸಿ ಇನ್ಸೂರೆನ್ಸ್ ಮೊತ್ತ ಒಟ್ಟು 87 ಕೋಟಿ.ರೂ ಸುಮಾರು 9000 ಬ್ಯಾಂಕಿನ ಗ್ರಾಹಕರ ಖಾತೆಗೆ ಬಿಡುಗಡೆ ಆಗಿದ್ದು. ಬ್ಯಾಂಕಿನಲ್ಲಿರುವ ಎಸ್.ಬಿ, ಸಿ.ಎ,ಎಫ್.ಡಿ,ಆರ್.ಡಿ ಹಾಗೂ ಪಿಗ್ನಿ ಸೇರಿದಂತೆ ವಿವಿಧ ಖಾತೆಗಳಲ್ಲಿರುವ ಹಣದ ಮೊತ್ತ ಗರಿಷ್ಠ 05 ಲಕ್ಷ.ರೂ ವರೆಗಿನ ಹಣವನ್ನು ಮರಳಿ ವಿಮೆ (ಡಿ.ಐ.ಸಿ.ಜಿಸಿ ಇನ್ಸೂರೆನ್ಸ್) ಮೂಲಕ ಬ್ಯಾಂಕಿನ ಗ್ರಾಹಕರ ಖಾತೆಗೆ ಇಂದು ಜಮಾ ಮಾಡಲಾಗಿದೆ.ಬ್ಯಾಂಕಿನ ಪ್ರಕರಣದಿಂದ ಆತಂಕದಲ್ಲಿದ್ದ ಗ್ರಾಹಕರಿಗೆ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಜರುಗಿದ ಗ್ರಾಹಕರ ಸಭೆಯಲ್ಲಿ ಆತ್ಮಸ್ಥೆರ್ಯ ತುಂಬಿದ್ದ ಸಾಹುಕಾರ ನುಡಿದಂತೆ ನಡೆದಿದ್ದಾರೆ ಎಂದು ಕೊಂಡಾಡಿ ಬ್ಯಾಂಕಿನ ಗ್ರಾಹಕರಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.