ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ, ಯಾರ್ಯಾರೋ ಎ ಟೀಮ್ ಬಿ ಟೀಮ್ ಅಂತಾ ಏನೇನೋ ಹೇಳ್ತಾರೆ. ನಾವು ಯಾವಾಗಲೂ ಎ ಟೀಮ್. ಅಂದ್ರೆ ಎ ಫಾರ್ ಎ1. ನಮ್ಮದು ಎ ಟೀಮ್, ಅವರೇ ಬಿ ಟೀಮ್. ನಾವು ನೀವು ಎ ಟೀಮ್ ಅಂದ್ರೆ ಮತದಾರರು ಎಲ್ಲಾರೂ ನಮ್ಮನ್ನು ನೋಡಿ ಎ ಟೀಮ್ ಎನ್ನಬೇಕು. ಅವರದ್ದು ಒಂದು ಬಿ ಇನ್ನೊಂದು ಸಿ ಟೀಮ್ ಎಂದು ಹೇಳುವ ಮೂಲಕ ಲಖನ್ ಜಾರಕಿಹೊಳಿ, ಸಹೋದರ ಸತೀಶ್ ಜಾರಕಿಹೊಳಿಗೆ ತೀರುಗೇಟು ಕೊಟ್ರು,
ಇನ್ನು ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತವೆ ಎಂಬ ಕಾಂಗ್ರೆಸ್ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮಗಳನ್ನು ಮಾಡುವವರೇ ಅವರು, ಮೊದಲು ಮಸಿಯನ್ನು ಕೈಗೆ ಹಚ್ಚಿಕೊಂಡು ನಂತರ ಬೇರೆಯವರ ಮುಖಕ್ಕೆ ವರೆಸುತ್ತಾರೆ. ನಾನೂ ಯಾರ ಮೇಲೆಯೂ ಅಲಿಗೇಶನ್ ಮಾಡುವುದಿಲ್ಲ ಎಂದರು. ಇನ್ನು ಸತೀಶ್ ಜಾರಕಿಹೊಳಿ ಪೊಲಿಂಗ್ ಬೂತ್ ಎಜೆಂಟ್ ಆಗುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ಅವರೊಬ್ಬ ರಾಜಕೀಯ ಪ್ರಭಾವೀ ವ್ಯಕ್ತಿಯಾಗಿದ್ದಾರೆ. ಇನ್ನು ಈ ವೇಳೆ ಪೊಲಿಂಗ್ ಏಜೆಂಟ್ ಆಗುವ ಮೂಲಕ ಚುನಾವಣೆ ಮೇಲೆ ಪ್ರಭಾವ ಬೀರಬಹುದು ಹಾಗಾಗಿ ಅವರು ಆದರೂ ನಮಗೇನೀ ಅಭ್ಯಂತರವಿಲ್ಲ. ಮತ ಹಾಕುವವರು ಮತಾದಾರರೇ ತಾನೇ ಎಂದರು.
ಇನ್ನು ಈಗಾಗಲೇ ಪರಿಷತ್ ಚುನಾವಣೆ ಕಣ ರಂಗೇರುತ್ತಿದೆ. ಊಬಯ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇನ್ನು ಮತದಾರ ಯಾರಿಗೆ ವಿಜಯದ ಮಾಲೆಯನ್ನು ತೊಡಿದಲಿದ್ದಾನೆ ಎಂದು ಕಾದು ನೋಡಬೇಕಿದೆ.