ಕೋಲಾರ, (ಹಿ.ಸ): ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಎತೂರು ಗ್ರಾಮದಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶಾಸಕಿ ರೂಪಕಲಾ ಶಶಿಧರ್‍ರವರಿಗೆ ಮನವಿ ಸಲ್ಲಿಸಿದರು.
ಎತೂರುನಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆ ಸರ್ವೇ ನೋ 52, 63/1, 62 ಹಾದು ಹೋಗುವ ರಸ್ತೆ ಈಗಲೇ ಸರ್ವೇ ಕಾರ್ಯ ನಡೆದಿದ್ದು, ಪರಿಶಿಷ್ಟ ಜಾತಿಯ ರೈತರ ಜಮೀನುಗಳಿಗೆ ರಸ್ತೆ ಬಿಡಲ್ಲವೆಂದು ಸಿ.ವಿ ಬಾಲಕೃಷ್ಣ ರವರು ಮುಳ್ಳು ತಂತಿಯನ್ನು ಅಳವಡಿಸಿರುತ್ತಾರೆ. ಇದರಿಂದ ಆ ಭಾಗದ ರೈತರು ಜಮೀನುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಸಿ. ವಿ.ಬಾಲಕೃಷ್ಣ, ಮುನಿರತ್ನಂ, ಗೋಪಾಲರೆಡ್ಡಿ, ರಮೇಶ್ ರೆಡ್ಡಿ ರವರುಗಳು ಗ್ರಾಮಸ್ಥರು ಜೆ.ಸಿ.ಬಿ. ಯಂತ್ರದಿಂದ ರಸ್ತೆ ಮಾಡಲು ಮುಂದಾದಾಗ ಅದನ್ನು ಲತಡೆದು ತೊಮದರೆ ಮಾಡಿದ್ದಾರೆ.
ಇದಕ್ಕೆ ಸಂಬಂದಿಸಿದಂತೆ ತಹಸೀಲ್ದಾರ್ ರವರು ಖುಲ್ಲಾ ನೋಟಿಸ್” 192(ಚಿ) ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ರಸ್ತೆಗೆ ಅಡ್ಡಿಪಡಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು.
ಎರಡು ಮೂರು ದಿನಗಳಲ್ಲಿ ರಸ್ತೆ ಕಾರ್ಯ ಮುಗಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ದಲಿತ ಸಂಘಟನೆಗಳು ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಿತ್ರ : ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಎತೂರು ಗ್ರಾಮದ ಬಂಡಿ ರಸ್ತೆ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಜನ ಸೇನೆಯು ಶಾಸಕಿ ರೂಪಕಲಾ ಶಶಿಧರ್‍ರವರಿಗೆ ಮನವಿ ಸಲ್ಲಿಸಿದರು.