Breaking News

ಬೆಳಗಾವಿ: ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ 54 ಜನರನ್ನು ರಕ್ಷಿಸಿ, ಸ್ಥಳಾಂತರ ಮಾಡಲಾಗಿದೆ.

Spread the love

ಬೆಳಗಾವಿ: ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ 54 ಜನರನ್ನು ರಕ್ಷಿಸಿ, ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ 54 ಜನ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದರು. ಎನ್​ಡಿಆರ್​ಎಫ್​ ತಂಡ ಹಾಗೂ ಸ್ಥಳೀಯ ಪೊಲೀಸರು ಜನರನ್ನು ರಕ್ಷಿಸಿ, ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಕೃಷ್ಣಾ ನದಿಯಿಂದ ಸವದಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಏಕಾಏಕಿ ನೀರು ಬಂದಿದ್ದರಿಂದ ಗ್ರಾಮಸ್ಥರು ಸಿಲುಕಿಕೊಂಡಿದ್ದರು.

ಉತ್ತರ ಕನ್ನಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಿಎಂ
ಭಾರೀ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಒಟ್ಟು 123 ಗ್ರಾಮಗಳಲ್ಲಿ ಹಾನಿಯಾಗಿದೆ. 19,421 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಹದಿಂದ 6 ಜನರ ಸಾವನ್ನಪ್ಪಿದ್ದಾರೆ.

15 ಜನರಿಗೆ ಗಾಯವಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ಒಬ್ಬರು ಕಾಣೆಯಾಗಿದ್ದಾರೆ. 294 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಜಿಲ್ಲೆಯಲ್ಲಿ 705 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 139 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಾಳಜಿ ಕೇಂದ್ರಗಳಿಗೆ 16,322 ಜನ ಸ್ಥಳಾಂತರವಾಗಿದ್ದರು. ಸದ್ಯ 40 ಕಾಳಜಿ ಕೇಂದ್ರಗಳಲ್ಲಿ 6,943 ಜನರು ಇದ್ದಾರೆ. 487.74 ಹೆಕ್ಟೇರ್​ನಷ್ಟು ಕೃಷಿ ಭೂಮಿ ಹಾನಿಯಾಗಿದೆ. 406 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗೆ ಹಾನಿ, ಜಿಲ್ಲೆಯಲ್ಲಿ 264.93 ಕಿಲೋ ಮೀಟರ್ ರಸ್ತೆ ಹಾನಿಯಾಗಿದೆ. 52 ಸೇತುವೆ, 39 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.

ಮಲಪ್ರಭಾ ನದಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ
ಮಲಪ್ರಭಾ ನದಿ ನೀರು ನುಗ್ಗಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಭಾಗದ ಬಿಸನಾಳ, ಇದ್ದಲಗಿ, ಕಮದತ್ತ, ಆಡಿಹಾಳ ಸೇರಿ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾನಿಯಾಗಿದೆ. ಜಲಾವೃತವಾದ ಜಮೀನಿನಲ್ಲಿ ನಿಂತು ಬಿಸನಾಳ ಗ್ರಾಮದ ರೈತ ಮಹಿಳೆ ದ್ಯಾಮವ್ವ ಕಣ್ಣೀರು ಹಾಕಿದ್ದಾರೆ. ವೋಟ್ ಕೇಳಲು ಬರುತ್ತಾರೆ, ಆಮೇಲೆ ಯಾರೂ ಬರೋದಿಲ್ಲ. ಪ್ರತಿ ವರ್ಷ ಹೀಗಾದ್ರೆ ಏನು ತಿನ್ನಬೇಕು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ