Breaking News

ಸಿಆರ್‌ಪಿಎಫ್‌ ಯೋಧರ ಮೇಲೆ ಮತ್ತೆ ಉಗ್ರರ ದಾಳಿ

Spread the love

ಶ್ರೀನಗರ,  -ಕಾಶ್ಮೀರ ಕಣಿವೆಯಲ್ಲಿ ಯೋಧರನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸುವ ಪ್ರಕರಣಗಳು ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್‍ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಯೋದರ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದಾರೆ.

ಸುದೈವವಶಾತ್ ಭಯೋತ್ಪಾದಕರ ಆಕ್ರಮಣದಲ್ಲಿ ಸಾವು-ನೋವು ಸಂಭವಿಸಿಲ್ಲ. ಮಿನಿ ಸೆಕ್ರೆಟರಿಯೇಟ್ (ಪುಟ್ಟ ಸಚಿವಾಲಯ)ನ ಭದ್ರತೆಗೆ ನಿಯೋಜಿಸಿದ್ದ ಸಿಆರ್‍ಪಿಎಫ್ ಯೋಧರನ್ನು ಹತ್ಯೆ ಮಾಡಲು ಉಗ್ರರು ಗುಂಡು ಹಾರಿಸಿ ಪರಾರಿಯಾದರು. ಅದೃಷ್ಟವಶಾತ್ ಯಾವ ಸಿಬ್ಬಂದಿಗೂ ಗಾಯಗಳಾಗಿಲ್ಲ.

ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.
ಜಮ್ಮು-ಕಾಶ್ಮೀರದ ಬದ್ಗಂ ಜಿಲ್ಲೆಯಲ್ಲಿ ಭಯೋತ್ಪಾದಕರು ಮೊನ್ನೆ ಸಿಅರ್‍ಪಿಎಫ್ ಅಕಾರಿಯೊಬ್ಬರು ಹತರಾಗಿದ್ದಾರೆ.

ಉಗ್ರ ಮೃತ ಅಕಾರಿ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ಬದ್ಗಂ ಜಿಲ್ಲೆಯ ಕೈಸರ್‍ಮುಲ್ಲಾ ಪ್ರದೇಶದಲ್ಲಿ ಇಂದು ಮುಂಜಾನೆ ಆತಂಕವಾದಿಗಳು, ಸಿಆರ್‍ಪಿಎಫ್‍ನ 117ನೇ ಬೆಟಾಲಿಯನ್‍ನ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಎ.ಸಿ ಬದೊಲೆ ಅವರ ಮೇಲೆ ದಾಳಿ ನಡೆಸಿ ಅವರ ಬಳಿ ಇದ್ದ ಎಕೆ-47 ಸರ್ವಿಸ್ ರೈಫಲ್ ಮತ್ತು ಬುಲೆಟ್‍ಗಳೊಂದಿಗೆ ಪರಾರಿಯಾದರು.

ತೀವ್ರ ಗಾಯಗೊಂಡ ಬದೊಲೆ ಶ್ರೀನಗರದ ಬದ್ಗಂ ಭಾಗ್‍ನ ಸೇನಾಪಡೆಯ 92ನೆ ಬೇಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸಿಆರ್‍ಪಿಎಫ್ ಅಕಾರಿಯನ್ನು ಹತ್ಯೆಗೈದು ಶಸ್ತ್ರಾಸ್ತ್ರದೊಂದಿಗೆ ಪರಾರಿಯಾಗಿರುವ ಉಗ್ರರಿಗಾಗಿ ಶೋಧ ಮುಂದುವರಿದಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ