ನವದೆಹಲಿ,ಮಾ.15- ಕೊರೋನ ಭೀತಿ ಹಿನ್ನೆಲೆಯಲ್ಲಿ ಇರಾನ್‍ನಿಂದ 234 ಭಾರತೀಯರನ್ನು ವಾಪಸ್ ಕರೆಸಿಕೊಂಡಿದ್ದು, ಈ ಪೈಕಿ 131 ವಿದ್ಯಾರ್ಥಿಗಳು, 103 ಯಾತ್ರಾರ್ಥಿಗಳು ಇದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಇಂದು ತಿಳಿಸಿದ್ದಾರೆ. ಕೊರೋನ ಪೀಡಿತ ಪ್ರದೇಶ ಇರಾನ್‍ನಲ್ಲಿರುವ ಭಾರತೀಯರನ್ನು ಆರೋಗ್ಯವಾಗಿ ವಾಪಸ್ ಕರೆಸಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ. ಇದಕ್ಕೆ ಸಹಕರಿಸಿದ ರಾಯಭಾರಿ ಧಾಮು ಗಡ್ಡಮ್ ಮತ್ತು ಆಟ್‍ಇಂಡಿಯಾ… ಇನ್… ಇರಾನ್ ತಂಡಕ್ಕೆ ಹಾಗೂ ಇರಾನಿನ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ಈಗಾಗಲೇ 58 ಭಾರತೀಯ ಯಾತ್ರಿಕರ ಮೊದಲ ಬ್ಯಾಚ್‍ನ್ನು ಇರಾನ್‍ನಿಂದ ಮಂಗಳವಾರ ವಾಪಸ್ಸಾಗಿದ್ದಾರೆ. ಶುಕ್ರವಾರ 44 ಭಾರತೀಯ ಯಾತ್ರಿಕರ 2ನೇ ಬ್ಯಾಚ್‍ನ್ನು ಕರೆಸಿಕೊಳ್ಳಲಾಗಿದೆ.ಇಂದು ಮೂರನೇ ಬ್ಯಾಚ್ ಕೂಡ ಸ್ವದೇಶಕ್ಕೆ ಆಗಮಿಸಿದ್ದು, ಇಂದು ಮುಂಜಾನೆಯೇ 234 ಮಂದಿ ಭಾರತಕ್ಕೆ ಬಂದಿದಿಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕಿಗೆ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದೆ. ಇಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುಲು ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ.
Check Also
ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಗೆ ಇಂದು ಚಾಲನೆ
Spread the love ಅಹಮದಾಬಾದ್: ಒಂಬತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. …