Breaking News

ಹುಬ್ಬಳ್ಳಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ!

Spread the love

ದಶಕಗಳ ಕಾಲ ಜೊತೆಗೂಡಿ ಸಂಸಾರ ನಡೆಸಿದ್ದ ದಂಪತಿ ಸಾವಿನಲ್ಲೂ ಒಂದಾದ ಘಟನೆ ಹುಬ್ಬಳ್ಳಿ-ಧಾರವಾಡದಲ್ಲಿ ಸಂಭವಿಸಿದೆ.
ಹುಬ್ಬಳ್ಳಿತಾಲೂಕಿನಶಿರಗುಪ್ಪಗ್ರಾಮದ ನಿವಾಸಿಗಳಾದ ಶಿವಪುತ್ರಪ್ಪನೆಲಗುಡ್ಡ (90) ಹಾಗೂಬಸಮ್ಮ (86) ಸಾವಿನಲ್ಲೂಒಂದಾದದಂಪತಿ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಅವರು ವಯೋಸಹಜ ಮರಣವನ್ನು ಹೊಂದಿದ್ದರು . ತನ್ನ ಪತಿಯ ಸಾವಿನಿಂದ ತೀವ್ರ ನೋವಿನಲ್ಲಿದ್ದ ಪತ್ನಿ ಬಸಮ್ಮ , ಶಿವಪುತ್ರಪ್ಪ ಅವರ ಅಂತ್ಯಕ್ರಿಯೆ ಸಮಯದಲ್ಲಿ ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ .
ಕುಟುಂಬಸ್ಥರು ಅಕ್ಕಪಕ್ಕವೇ ದಂಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ದಂಪತಿಯ ಸಾವಿಗೆ ಕುಟುಂಬಸ್ಥರು ಮಾತ್ರವಲ್ಲದೆ ಗ್ರಾಮಸ್ಥರು ಕೂಡಾ ಕಂಬನಿ ಮಿಡಿದಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ