Breaking News

ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು.

Spread the love

ಹಾವೇರಿ: ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈಗ ಆ ಗುಂಡಿಗಳೇ ಆ ಬಾಲಕರ ಪಾಲಿಗೆ ಮೃತ್ಯುಕೂಪವಾಗಿದ್ದು, ಮೂರು ಜೀವವನ್ನ ಪಡೆದಿವೆ.

ಶಾಲಾ ಆವರಣದಲ್ಲಿರುವ ಗುಂಡಿಗಳಲ್ಲಿ ತುಂಬಿರೋ ನೀರು. ನೀರಿನಿಂದ ಬಾಲಕರ‌ ಮೃತದೇಹ ಹೊರತೆಗಿತಿರೋ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು. ಗುಂಡಿಯಲ್ಲಿನ ನೀರು ಹೊರಹಾಕ್ತಿರೋ ಪುರಸಭೆ ಸಿಬ್ಬಂದಿ.

ಗುಂಡಿಯಲ್ಲಿ ಬಿದ್ದು ಮೂವರು ಬಾಲಕರು ಸಾವು!
 ಹಾವೇರಿ‌ ಜಿಲ್ಲೆ ಬ್ಯಾಡಗಿ ಪಟ್ಟಣದ ಸರ್ಕಾರಿ ಹಿರಿಯ ಉರ್ದು ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ನಡೆಯ ಬಾರದ ಘಟನೆ ನಡೆದು ಹೋಗಿದೆ.

ಈ ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇರೋದಕ್ಕೆ ಹೊಸದಾಗಿ ಮತ್ತೆರಡು ಕೊಠಡಿಗಳು ಮಂಜೂರಾಗಿದ್ದವು. ಕೊಠಡಿಗಳ ನಿರ್ಮಾಣಕ್ಕೆ ಗುಂಡಿ ತೆಗೆಯಲಾಗಿತ್ತು.

ಆದ್ರೂ ಶಾಲೆ ಸುತ್ತಮುತ್ತಲಿನ ಬಾಲಕರು ಶಾಲಾ ಮೈದಾನದಲ್ಲಿ ನಿತ್ಯವೂ ಆಟ ಆಡುತ್ತಿದ್ರು. ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕೊಠಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿತ್ತು. ಇಲ್ಲಿ ಆಟ ಆಡೋಕೆ ಅಂತ ಆರು ಜನ ಬಾಲಕರು ಹೋಗಿದ್ದಾರೆ. ಹೀಗೆ ಆಟ ಆಡುತ್ತಾ ಆಡುತ್ತಾ ಬಾಲಕರು ಗುಂಡಿಯೊಳೆಗೆ ಬಿದ್ದಿದ್ದು, ಮೂವರು ಬಾಲಕರು ಗುಂಡಿಯಲ್ಲಿನ ನೀರಲ್ಲಿ‌ ಮುಳುಗಿ ಮೃತಪಟ್ಟಿದ್ದಾರೆ.

 ಮೂವರು ಬಾಲಕರು ನೀರಲ್ಲಿ ಮುಳುಗಿರೋ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ನೀರಿಗೆ ಇಳಿದಿದ್ದಾರೆ. ಅಷ್ಟರಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ರು. ಮತ್ತೊಬ್ಬನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಆತ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದಾನೆ. ಮೃತ ಬಾಲಕರನ್ನ ಜಾಫರ್, ಅಜ್ಮಲ್, ಅಕ್ಮಲ್ ಅಂತ ಗುರುತಿಸಲಾಗಿದೆ. ಮೂವರು ಬಾಲಕರು ನೀರಲ್ಲಿ‌ ಮುಳುಗಿರೋ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಮೃತದೇಹಗಳನ್ನ ಹೊರತೆಗೆಯೋ ಕಾರ್ಯಾಚರಣೆ ನಡೆಸಿದ್ರು.

ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಬಾಲಕರನ್ನ ಕಳೆದು ಕೊಂಡ ಕುಟಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಮೃತ ಬಾಲಕರ‌ ಕುಟುಂಬಕ್ಕೆ ತಲಾ ಐದು ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒಟ್ನಲ್ಲಿ ಆಟ ಆಡುತ್ತಿದ್ದ ಮೂವರು ಮಕ್ಕಳು ನೀರಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದು ಮಾತ್ರ ದುರಂತ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ