Breaking News

ಪತಿಯ ಅಂತ್ಯಕ್ರಿಯೆಗೆ ತೆರಳಲು 20 ನಿಮಿಷದಲ್ಲೇ ಪಾಸ್ ನೀಡಿದ ತಾಲೂಕಾಡಳಿತ………

Spread the love

ಹುಬ್ಬಳ್ಳಿ: ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕ ಆಡಳಿತ ಕಾರ್ಯದಕ್ಷತೆಯನ್ನು ಮೆರೆದಿದೆ.

ಅರವಿಂದ ನಗರದ ಯಶೋಧ ಲೋಕಾಪುರ ಎಂಬವರ ಪತಿ ಬಾಗಲಕೋಟೆಯ ನವನಗರದಲ್ಲಿ ಸಾವನ್ನಪ್ಪಿದ್ದರು. ಬಾಗಲಕೋಟೆಗೆ ತೆರಳು ಪಾಸ್ ಇಲ್ಲದೆ ಎರಡು ಚಿಕ್ಕ ಮಕ್ಕಳ ಜೊತೆ ತಹಶೀಲ್ದಾರ ಕಚೇರಿಗೆ ಆಗಮಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ನೀಡುವಂತೆ ಮನವಿ ಮಾಡಿದ್ದಾರೆ. ಮಹಿಳೆಯ ಪರಸ್ಥಿತಿಯನ್ನು ಆಲಿಸಿದ ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ ಅವರು ಜಿಲ್ಲಾಡಳಿತ ಸಹಾಯದೊಂದಿಗೆ ಕೇವಲ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಕಾರ್ಯದಕ್ಷತೆ ಮೆರೆದಿದ್ದಾರೆ.

ಪಾಸ್ ಪಡೆದ ಮಹಿಳೆ ಹಾಗೂ ಮಕ್ಕಳು ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಿ ಭಾರವಾದ ಮನಸ್ಸಿನಿಂದ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.


Spread the love

About Laxminews 24x7

Check Also

ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ: ವಾಯುವ್ಯ ಸಾರಿಗೆಯಿಂದ ಹೆಚ್ಚುವರಿ ವಿಶೇಷ ಬಸ್​​ ಸೌಲಭ್ಯ

Spread the love ಹುಬ್ಬಳ್ಳಿ (ಧಾರವಾಡ): ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 22 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ