ಗೋಕಾಕ ;- ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹವನ್ನು ನಿಯಂತ್ರಿಸಲು ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ರಾಜು ವರದಾಯಿ ಹೇಳಿದರು.
ಬುಧವಾರದಂದು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ರೋಟರಿ ಸಂಸ್ಥೆ, ಆರ್ಟ ಆಫ್ ಲಿವಿಂಗ್, ಟೊರೊಂಟೋ ಫಾರ್ಮ ಹಾಗೂ ರಿಸರ್ಚಸೊಸೈಟಿ ಫಾರ್ ಸ್ಟಡಿ ಆಫ್ ಡಯಾಬಿಟಿಸ್ ಇಂಡಿಯಾದವರು ಸಂಯುಕ್ತವಾಗಿ ಆಯೋಜಿಸಿದ್ದ ಭಾರತದಾಧ್ಯಂತ ಒಂದೇ ದಿನದಲ್ಲಿ 10 ಲಕ್ಷ ಮಧುಮೇಹಿಗಳ ತಪಾಸಣಾ ಶಿಭಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದೇಶದಲ್ಲಿ ಅತೀ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಒತ್ತಡ ಮುಕ್ತರಾಗಿ ಇದರಿಂದ ದೂರವಿರಬಹುದು. ಪ್ರಾರಂಭದಲ್ಲಿ ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮಕ್ಕೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ತಪಾಸಣೆ ಮಾಡಿಸಿಕೊಳ್ಳುವದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ, ಪ್ರೊ. ಎಮ್.ಬಿ.ತುಪ್ಪದ, ಉದಯ ಹುಕ್ಕೇರಿ ಸೇರಿದಂತೆ ಅನೇಕರು ಇದ್ದರು.