Breaking News

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮದಲ್ಲಿ ಬಸವರಾಜ ದೇಶನೂರ ಮಾತನಾಡುತ್ತಿರುವುದು. 

Spread the love

ಗೋಕಾಕ  ;- ನಗರಸಭೆಯಿಂದ “ಸ್ವಚ್ಛ ಭಾರತ ಮಿಷಣ್’ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ ಬುಧವಾರದಂದು “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ ಅವರು ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ನಗರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನತೆಯು ನಗರಸಭೆಯವರು ತಿಳಿಸಿದಂತೆ ಒಣಕಸ, ಹಸಿಕಸ ಹಾಗೂ ಹಾನಿಕಾರಕ ಕಸವನ್ನು ಪ್ರತ್ಯೇಕಿಸಿ ನಗರಸಭೆಯ ವಾಹನಗಳಿಗೆ ನೀಡಬೇಕು. ಸಾರ್ವಜನಿಕರು ಕಸವನ್ನು ಗಟಾರ ಹಾಗೂ ರಸ್ತೆಗಳಿಗೆ ಚೆಲ್ಲದೇ ಮನೆಮನೆಗೆ ಬರುವ ನಗರಸಭೆಯ ವಾಹನಗಳಿಗೆ ನೀಡಿ ನಗರವನ್ನು ಸ್ವಚ್ಚವಾಗಿಡಲು ಸಹಕಾರ ನೀಡಬೇಕು. ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಗರದ ಸೌಂದರ್ಯೀಕರಣಕ್ಕೂ ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಈ ಕಾರ್ಯವನ್ನು ಬೆಂಬಲಿಸೋಣ ಎಂದರು.

 

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಧರೀಶ ಕಲಘಾಣ, ಶಿವಪ್ಪಾ ಕುರಬೇಟ, ಅಶೋಕ ಪಾಟೀಲ, ವಿನಾಯಕ ಕುರಬೇಟ, ಅರವಿಂದ ದೇಶನೂರ, ಪ್ರಮೋದ ಕುರಬೇಟ, ಸದಾ ಮಟ್ಟಿಕಲ್ಲಿ, ರಾಘವೇಂದ್ರ ಜೋರಾಪೂರ, ರವಿ ಜುಗಳಿ, ಹರೀಶ ಶೇಗುಣಶಿ, ಕೇದಾರಿ ಕರಣಿ, ವಿನಯ ಅಂಗಡಿ, ಈರಣ್ಣಾ ಕುರಬೇಟ, ಪ್ರಲ್ಹಾದ ಖಾವಿ, ಸಂಜು ಪತ್ತಾರ, ಅಂತವ್ವಾ ಹಿಡಕಲ್, ದಾನಮ್ಮಾ ಸೊಗಲಿ, ಶಾಂತವ್ವಾ ಮಡಿವಾಳರ, ಸಂದ್ಯಾ ಅಗಳನ್ನವರ, ಸಾಂವಕ್ಕಾ ಹೊಸಮನಿ, ವಿಶಾಲಾಕ್ಷಿ ಕರೋಶಿ, ನಗರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಜೆ.ಸಿ.ತಾಂಬೋಳಿ, ಕೆ.ಎಸ್.ಕೋಳಿ, ಸಿಬ್ಬಂದಿಗಳಾದ ರಮೇಶ ಕಳ್ಳೀಮನಿ, ಸದಾಶಿವ ನಾಯ್ಕ, ಅಜಯ ಕನಮಡ್ಡಿ, ಸದಾಶಿವ ಕಳ್ಳೀಮನಿ, ಸೇರಿದಂತೆ ಅನೇಕರು ಇದ್ದರು.

 

 


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ